Asianet Suvarna News Asianet Suvarna News

ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!

ಮುಂದಿನ ವರ್ಷ ನಡೆ​ಯುವ ವಿಧಾ​ನ​ಸಭಾ ಚುನಾ​ವ​ಣೆಗೆ ಭರ್ಜರಿ ತಯಾರಿ ನಡೆ​ಸು​ತ್ತಿ​ರುವ ಸಿಎಂ| ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!| 

Delhi Government Waives Off Fitness Fee Of Auto Drivers
Author
Bangalore, First Published Aug 14, 2019, 11:54 AM IST

ನವ​ದೆ​ಹ​ಲಿ[ಆ.14]: ಮುಂದಿನ ವರ್ಷ ನಡೆ​ಯುವ ವಿಧಾ​ನ​ಸಭಾ ಚುನಾ​ವ​ಣೆಗೆ ಭರ್ಜರಿ ತಯಾರಿ ನಡೆ​ಸು​ತ್ತಿ​ರುವ ದೆಹಲಿ ಮುಖ್ಯಮಂತ್ರಿ ಅರ​ವಿಂದ ಕೇಜ್ರಿ​ವಾಲ್‌ ಜನ​ಪ್ರಿಯ ಯೋಜ​ನೆ​ಗಳ ಮೂಲಕ ಅಧಿ​ಕಾರ ಉಳಿ​ಸಿ​ಕೊ​ಳ್ಳುವ ಕಸ​ರತ್ತು ಮುಂದುವರೆಸಿದ್ದಾರೆ.

ಇತ್ತೀಚೆಗಷ್ಟೇ ಮಹಿ​ಳೆ​ಯ​ರಿಗೆ ಬಸ್‌ ಹಾಗೂ ಮೆಟ್ರೋ​ಗ​ಳಲ್ಲಿ ಉಚಿತ ಪ್ರಯಾಣ, ಜನಸಾಮಾನ್ಯರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌, ಉಚಿತ ವೈಫೈ ಸೇವೆ ಘೋಷಿಸಿದ್ದ ಕೇಜ್ರಿ​ವಾಲ್‌, ಈಗ ಆಟೋ ಚಾಲ​ಕ​ರನ್ನೂ ಸೆಳೆ​ಯಲು ಮುಂದಾ​ಗಿದ್ದು, ಆಟೋ ಚಾಲ​ಕ​ರಿಗೆ ವಿಧಿ​ಸ​ಲಾ​ಗುತ್ತಿದ್ದ ವಿವಿಧ ಕರ​ ಹಾಗೂ ದಂಡ​ಗ​ಳಲ್ಲಿ ವಿನಾ​ಯಿತಿ ಘೋಷಿ​ಸಿ​ದ್ದಾರೆ. ಆಟೋಗಳಿಗೆ ವಿಧಿಸುತ್ತಿದ್ದ 600 ರು. ಫಿಟ್ನೆಸ್‌ ಟೆಸ್ಟ್‌ ಶುಲ್ಕ​ ಹಾಗೂ 100 ರು. ಜಿಪಿ​ಎಸ್‌ ಶುಲ್ಕ ಸಂಪೂ​ರ್ಣ​ವಾಗಿ ರದ್ದು ಮಾಡ​ಲಾ​ಗಿದೆ.

ರಿಕ್ಷಾ​ ನೋಂದಣಿ ಹಾಗೂ ಮರು ನೋಂದಣಿ ಶುಲ್ಕ​ವ​ನ್ನು 1000 ರು.ನಿಂದ 300 ರು.ಗೆ ಇಳಿ​ಸ​ಲಾ​ಗಿ​ದೆ. ಫಿಟ್ನೆಸ್‌ ಟೆಸ್ಟ್‌ ವಿಳಂಬ​ವಾ​ದರೆ 1000 ರು. ಹಾಗೂ ದಿನಕ್ಕೆ 50 ರು.ನಂತೆ ವಿಳಂಬ​ ಶುಲ್ಕ ಪಾವತಿ ಮಾಡ​ಬೇ​ಕಿತ್ತು. ಅದರೆ ಅದನ್ನು 300 ಹಾಗೂ 20 ರು.ಗೆ ಕಡಿ​ತ​ಗೊ​ಳಿ​ಸ​ಲಾ​ಗಿದೆ. ನೊಂದಣಿ ಪತ್ರದ ನಕಲು ಪ್ರತಿ ಹಾಗೂ ಮಾಲಿ​ಕತ್ವ ಬದ​ಲಾ​ವ​ಣೆಗೆ ಚಾಲ್ತಿ​ಯ​ಲ್ಲಿದ್ದ 500 ರು.ರು ಬದ​ಲಿಗೆ 150 ರು. ನಿಗದಿ ಪಡಿ​ಸ​ಲಾ​ಗಿದೆ. ಪರ್ಮಿಟ್‌ ನವೀ​ಕ​ರ​ಣ ಶುಲ್ಕವನ್ನು 1000 ರು.ನಿಂದ 500 ರು.ಗೆ ಕಡಿ​ತ​ಗೊ​ಳಿಸ​ಲಾ​ಗಿದೆ.

ಕೇಜ್ರಿ ಸರ್ಕಾ​ರದ ಈ ನೀತಿ​ಯಿಂದ ರಾಜ​ಧಾ​ನಿಯ 90 ಸಾವಿರ ಆಟೋ ಚಾಲ​ಕ​ರಿಗೆ ಉಪ​ಯೋ​ಗ​ವಾ​ಗ​ಲಿದ್ದು, ದೆಹಲಿ ಅಟೋ ರಿಕ್ಷಾ ಸಂಘ ಸರ್ಕಾರದ ಈ ನಿರ್ಧಾ​ರ​ವನ್ನು ಸ್ವಾಗ​ತಿ​ಸಿದೆ.

Follow Us:
Download App:
  • android
  • ios