Asianet Suvarna News Asianet Suvarna News

ಗಂಭೀರ ಮಾಲಿನ್ಯ; ದಿಲ್ಲಿಲಿ ಕೈಗಾರಿಕೆ ನಿರ್ಮಾಣಕ್ಕೆ ಬ್ರೇಕ್!

ರಾಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರಿದೆ ವಾಯು ಮಾಲಿನ್ಯ | ಹಾಗಾಗಿ ಎಲ್ಲಾ ನಿರ್ಮಾಣ ಕಾರ್ಯಕ್ಕೆ ಬಿದ್ದಿದೆ ಬ್ರೇಕ್ ! 

Delhi air pollution hits alarming levels; STOP all construction
Author
Bengaluru, First Published Dec 25, 2018, 11:08 AM IST

ನವದೆಹಲಿ (ಡಿ. 25): ರಾಜಧಾನಿ ನವದೆಹಲಿಯಲ್ಲಿ ವಾಯುಗುಣಮಟ್ಟ ಸತತ ಮೂರನೇ ದಿನವಾದ ಸೋಮವಾರ ಕೂಡಾ ತೀರಾ ಹದಗೆಟ್ಟ ಸ್ಥಿತಿಯಲ್ಲೇ ಮುಂದುವರೆದ ಕಾರಣ, ತಕ್ಷಣದಿಂದ ಜಾರಿಗೆ ಬರುವಂತೆ 3 ದಿನಗಳ ಕಾಲ ನಗರದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳು ಮತ್ತು ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ.

ದೀಪಾವಳಿ ನಂತರದ ಪ್ರಸಕ್ತ ಅತ್ಯಂತ ಹೆಚ್ಚಿನ ವಾಯು ಮಾಲಿನ್ಯ ದಾಖಲಾಗಿದ್ದು, ಈ ತುರ್ತು ಕ್ರಮಗಳ ಜಾರಿಗೆ ಸುಪ್ರೀಂ ಕೋರ್ಟ್‌ನಿಂದ ನೇಮಕವಾದ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ)ಕ್ಕೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಶಿಫಾರಸು ಮಾಡಿದೆ. 

Follow Us:
Download App:
  • android
  • ios