ನವದೆಹಲಿ[ಜೂ.25]: ಭಾರತೀಯ ವಾಯು ಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರ ಮೀಸೆಯನ್ನು ‘ರಾಷ್ಟ್ರೀಯ ಮೀಸೆ’ ಎಂದು ಘೋಷಿಸುವಂತೆ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಸೋಮವಾರ ಆಗ್ರಹಿಸಿದ್ದಾರೆ.

ಲೋಕಸಭೆಯ ಚರ್ಚೆಯ ವೇಳೆ ಮತನಾಡಿದ ಚೌಧರಿ, ಈ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ, ಪಾಕಿಸ್ತಾನದ ಎಫ್‌- 16 ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಅಭಿನಂದರ್‌ಗೆ ಪ್ರಶಸ್ತಿ ನೀಡಿ ಗೌರವಿಸಬೇಕು. ಇದರಿಂದ ಭದ್ರತಾ ಪಡೆಗಳ ನೈತಿಕ ಸ್ಥೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಯುದ್ಧ ವಿಮಾನವನ್ನು ಬೆನ್ನಟ್ಟುವಾಗ ಮಿಗ್‌ ವಿಮಾನ ಪತನಗೊಂಡು, ಫೆ.27ರಂದು ಸೆರೆಸಿಕ್ಕಿದ್ದ ಅಭಿನಂದನ್‌, ಮಾ.1ರಂದು ಬಿಡುಗಡೆ ಆಗಿದ್ದರು. ಬಳಿಕ ಅಭಿನಂದನ್‌ ಅವರ ಮೀಸೆ ದೇಶದೆಲ್ಲೆಡೆ ಜನಪ್ರಿಯವಾಗಿತ್ತು. ಅನೇಕ ಮಂದಿ ಅಭಿನಂದನ್‌ ರೀತಿಯಲ್ಲೇ ಮೀಸೆ ಬಿಟ್ಟಿದ್ದರು.