ಆದಿತ್ಯನಾಥ್‌ ದಿಢೀರನೇ ಸಿಎಂ ಆಗಿ ಆಯ್ಕೆಯಾಗಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಆದರೆ ಫಲಿತಾಂಶ ಬರುವ ಮೊದಲೇ ಸಿಎಂ ಹುದ್ದೆಗೆ ಯೋಗಿಯನ್ನು ಕೂರಿಸಲು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಸಿದ್ಧತೆ ಮಾಡಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಲಖನೌ: ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬಳಿಕ ಸಿಎಂ ಹುದ್ದೆಗೆ ಹಲವು ಹೆಸರು ಕೇಳಿಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಯೋಗಿ ಆದಿತ್ಯನಾಥ್‌ ದಿಢೀರನೇ ಸಿಎಂ ಆಗಿ ಆಯ್ಕೆಯಾಗಿದ್ದರು. ಇದು ಭಾರೀ ಸುದ್ದಿಯಾಗಿತ್ತು.

ಆದರೆ ಫಲಿತಾಂಶ ಬರುವ ಮೊದಲೇ ಸಿಎಂ ಹುದ್ದೆಗೆ ಯೋಗಿಯನ್ನು ಕೂರಿಸಲು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಸಿದ್ಧತೆ ಮಾಡಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಫಲಿತಾಂಶದ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಗೋರಖ್‌ಪುರದ ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್‌ ಮುಂದಾಗಿದ್ದರು. ಅಲ್ಲದೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಜತೆಗೆ ವಿದೇಶ ಪ್ರವಾಸಕ್ಕೆ ತೆರಳಲು ಯೋಗಿ ಆದಿತ್ಯನಾಥ್‌ ಮುಂದಾಗಿದ್ದರು. ಇದರ ಅನುಮತಿಗಾಗಿ ಪಾಸ್‌ಪೋರ್ಟ್‌ನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು.

ಆದರೆ ಪ್ರಧಾನಿ ಕಾರ್ಯಾಲಯ ಯೋಗಿ ಅವರ ಪಾಸ್‌ಪೋರ್ಟ್‌ನ್ನು ತಿರಸ್ಕಾರ ಮಾಡಿತ್ತು. ಈ ಬಗ್ಗೆ ಮುನಿಸು ಹೊಂದಿದ್ದ ಯೋಗಿಗೆ ಇದ್ದಕ್ಕಿದ್ದಂತೆ ದೆಹಲಿಗೆ ಬರುವಂತೆ ಒಂದು ದಿನ ಅಮಿತ್‌ ಶಾ ಕರೆ ಮಾಡಿದ್ದರು. ಈ ವೇಳೆ ನಿಮ್ಮನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ.