ಅಭಿವೃದ್ಧಿಗೆ ಬೆಂಬಲ ನೀಡುವ ದೃಷ್ಟಿಯಿಂದ ಬಿಜೆಪಿಗೆ ಸಪೋರ್ಟ್ ಮಾಡುತ್ತಿರುವುದಾಗಿ  ಶಾಸಕರೋರ್ವರು ಘೋಷಿಸಿದ್ದಾರೆ. 

ಕೋಲಾರ [ಆ.16] : ಭಾರತದತ್ತ ಎಲ್ಲರೂ ಕಣ್ಣರಳಿಸಿ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಹೆಜ್ಜೆಯಲ್ಲಿ ಸಾಗೋಣ ಎಂದು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದು ಪಕ್ಷೇತರ ಶಾಸಕ ಎಚ್. ನಾಗೇಶ್ ಹೇಳಿದ್ದಾರೆ. 

ಇಂದಿರಾ ನಂತರ ದೇಶವನ್ನು ಯಾರು ಸರಿ ಮಾಡುತ್ತಾರೆ ಎನ್ನುವ ಆತಂಕ ನಮ್ಮಲ್ಲಿತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ವ್ಯವಸ್ಥೆ ಸಂಪೂರ್ಣವಾಗಿ ಸರಿಯಾಗಿದೆ ಎಂದು ಕೋಲಾರದ ಮುಳುಬಾಗಿಲು ಕ್ಷೇತ್ರದ ಶಾಸಕ ನಗೇಶ್ ಹೇಳಿದರು. 

ಮೋದಿಯವರಂತಹ ನಾಯಕ ಇರುವಾಗ ನಮ್ಮ ದೇಶಕ್ಕೆ ಯಾವುದೆ ಭಯವಿಲ್ಲ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಅಭಿವೃದ್ದಿಗಾಗಿ ನಾನು ಬಿಜೆಪಿಗೆ ಬೆಂಬಲ ನೀಡುವ ನಿರ್ಧಾರ ಮಾಡಿದ್ದೇನೆ ಎಂದರು. 

ಕೋಲಾರ: 14 ತಿಂಗಳಿಂದ ಶಾಸಕರು ನಾಪತ್ತೆ, ಎಸ್‌ಪಿಗೆ ದೂರು

ಸುಭದ್ರ ಸರ್ಕಾರ ಮಾಡುವವರಿಗೆ ನನ್ನ ಬೆಂಬಲ. ಕ್ಷೇತ್ರದ ಮುಖಂಡರು, ಮತದಾರರ ನಿರ್ಧಾರ‌ದಂತೆ ಈ ಹೆಜ್ಜೆ ಇಟ್ಟಿದ್ದೇನೆ. ಯಾರು ಬ್ಲಾಕ್ ಮಾಡಿಲ್ಲ. ಎಲ್ಲರೂ ಪರಿಚಯ ಇರುವವರು ಹಾಗಾಗಿ ನನ್ನ ಮೇಲೆ ಬೆಂಬಲ ನೀಡಲು ಒತ್ತಡ ಯಾರು ಹಾಕಿಲ್ಲ ಎಂದರು. 

ಬಿಜೆಪಿ ಪಾಳೇಯಕ್ಕೆ ಸೇರಿಕೊಂಡ ಮೈತ್ರಿ ಬೆಂಬಲಿಸಿದ್ದ ಶಾಸಕ

ಕಾಂಗ್ರೇಸ್ ಆಗಲಿ ಜೆಡಿಎಸ್ ನಾಯಕರಾಗಲಿ ಯಾರೂ ನನ್ನ ಸಂಪರ್ಕ ಮಾಡಿಲ್ಲ. ಡಿಕೆಶಿ ಮುಂಬೈಗೆ ಬಂದಿದ್ದನ್ನ ನಾನು ಟಿವಿಯಲ್ಲಿ ನೋಡಿದ್ದು ಅಷ್ಟೆ ಎಂದ ನಾಗೇಶ್ ಅಧಿಕೃತವಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.