ಬೆಂಗಳೂರು [ಜು.18] : ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿಯಲು ವಿಶ್ವಾಸ ಮತ ಯಾಚನೆ ಮೊರೆ ಹೋಗಿದೆ. ಇತ್ತ ಮೈತ್ರಿ ಪಾಳಯಕ್ಕೆ ಕೈ ಕೊಟ್ಟು ತೆರಳಿದ್ದ ಎಚ್. ನಾಗೇಶ್ ಬಿಜೆಪಿ ಗುಂಪು ಸೇರಿದ್ದಾರೆ. 

ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ಜೊತೆಗೆ ಎಚ್. ನಾಗೇಶ್ ತೆರಳಿದ್ದಾರೆ. ಅಲ್ಲದೇ ಸದನಕ್ಕೆ ಬಾರದಿರಲು ಕೂಡ ನಿರ್ಧಾರ ಮಾಡಿಯೇ ತೆರಳಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೋಸ್ತಿ ನಾಯಕರು ಮನವೊಲಿಕೆಗೆ ಎಷ್ಟೇ ಯತ್ನಿಸಿದರೂ ಕೂಡ ಇದಕ್ಕೆ ಬಗ್ಗದ ನಾಗೇಶ್ ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. 

ಇತ್ತ ಅತೃಪ್ತತೆಯಿಂದ ಮುಂಬೈ ಸೇರಿರುವ ಶಾಸಕರೂ ಕೂಡ ಸದನಕ್ಕೆ ಗೈರಾಗಿದ್ದು, ಸರ್ಕಾರಕ್ಕೆ ಮತ್ತಷ್ಟು ಆತಂಕ ತಂದಿದೆ.