ಶಿವಮೊಗ್ಗ(ಸೆ.3): ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಹೈಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯ ಆದೇಶವನ್ನು ಖಾಯಂ ಮಾಡಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. 2009ರ ಫೆಬ್ರವರಿ 18ರಂದು ರಾಜ್ಯದ ವಿಕೃತ ಕಾಮಿ ಉಮೇಶ ರೆಡ್ಡಿಗೆ ರಾಜ್ಯ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಹತ್ತಾರು ಮಹಿಳೆಯರನ್ನು ವಿಕೃತವಾಗಿ ಅತ್ಯಾಚಾರ ಮಾಡುತ್ತಿದ್ದ. ರಾಜ್ಯದ ಪೋಲೀಸರ ನಿದ್ದೆಗೆಡೆಸುತ್ತಿದ್ದ ಉಮೇಶ ರೆಡ್ಡಿಯು ಹೈಕೋರ್ಟ್ ಆದೇಶದ ವಿರುದ್ದ ದೇಶದ ಸುಪ್ರೀಂ ಕೋರ್ಟ್‌ಗೆ ಅಫೀಲು ಹೋಗಿದ್ದ. ಇಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶ ಎತ್ತಿ ಹಿಡಿದು ಗಲ್ಲು ಶಿಕ್ಷೆ ಖಾಯಂ ಗೊಳಿಸಿದೆ.

Add Asianetnews Kannada as a Preferred SourcegooglePreferred