ಭುವನೇಶ್ವರ[ಅ.02]: ಒಡಿಶಾದಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಮೇಕೆಯಿಂದಾಗಿ ಮಹಾನದಿ ಕೋಲ್ ಲಿಮಿಟೆಡ್[ಕಲ್ಲಿದ್ದಲು ಕಂಪೆನಿ]ಗೆ 2.68 ಕೋಟಿ ರೂಪಾಯಿ ನಷ್ಟವಾಗಿದೆ. ಹೌದು ಮೇಕೆ ಮೃತಪಟ್ಟ ಬಳಿಕ ನಡೆದ ಆಂದೋಲನದಿಂದ ಕಂಪೆನಿಯ ಕೆಲಸದಲ್ಲಿ ತೊಡಕುಂಟಾಗಿದೆ. ಈ ಕರಣದಿಂದ ಕಂಪೆನಿಯು ಇಷ್ಟು ಪ್ರಮಾಣದ ನಷ್ಟವನ್ನೆದುರಿಸಿದೆ. 

ಈ ಕುರಿತಾಗಿ ಪ್ರತಿಕ್ರಿಯಿಸಿರುವ MCL 'ಕಲ್ಲಿದ್ದಲು ಸಾಗಿಸುತ್ತಿದ್ದ ಟಿಪ್ಪರ್ ಒಂದರ ಕೆಳಗೆ ಬಂದಿದ್ದ ಮೇಕೆ ಸಾವನ್ನಪ್ಪಿತ್ತು. ಇದರಿಂದ ಉದ್ರಿಕ್ತರಾದ ಸ್ಥಳೀಯರು 60 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯ ಹೇರಿದರು. ಹೀಗಿರುವಾಗ ಹತ್ತಿರದ ಮತ್ತೊಂದು ಹಳ್ಳಿಯ ಕೆಲ ಜನರು ಸೋಮವಾರ ಬೆಳಗ್ಗೆ ಇಲ್ಲಿಗಾಗಮಿಸಿ ಒತ್ತಾಯಪೂರ್ವಕವಾಗಿ ಕಲ್ಲಿದ್ದಲಿನ ಕೆಲಸ ನಿಲ್ಲಿಸಿದ್ದಾರೆ' ಎಂದು ತಿಳಿಸಿದೆ. 

ಪ್ರಕರಣ ಗಮಭೀರ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿದ್ದಾರೆ. ಹೀಗಾಘಿ ಮಧ್ಯಾಹ್ನ 2.30ಗಂಟೆಗೆ ಕೆಲಸ ಮತ್ತೆ ಆರಂಭಗೊಂಡಿದೆ. ಆದರೆ ಅಷ್ಟರಲ್ಲಾಗಲೇ 2.68ಕೋಟಿ ರೂಪಾಯಿ ನಷ್ಟವಾಗಿತ್ತು. ಇಷ್ಟೇ ಅಲ್ಲದೇ ಕಲ್ಲಿದ್ದಲು ಕೆಲಸ ಸ್ಥಗಿತಗೊಂಡ ಪರಿಣಾಮ ಸರ್ಕಾರಕ್ಕೂ 46 ಲಕ್ಷ ರೂಪಾಯಿ ನಷ್ಟವುಂಟಾಗಿದೆ. 

ಇನ್ನು ಅಕ್ರಮವಾಗಿ ಕೆಲಸ ಸ್ಥಗಿತಗೊಳಿಸಿದ ಜನರ ವಿರುದ್ಧ ಕಂಪೆನಿ ಕೇಸ್ ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. 

ಅ.02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: