‘ನಿಶೆಯಲ್ಲಿನ ಮಾತು ಕಿಸೆದಾಗ’ ಎಂದು ಹಳ್ಳಿಗಳಲ್ಲಿ ಜೋಕ್‌ ಮಾಡೋದುಂಟು. ಆದ್ರೆ, ಗಾಂಜಾ ನಶೆಯಲ್ಲಿ ವ್ಯಕ್ತಿಯೋರ್ವ ಮಾಡಿದ ಕೆಲಸಕ್ಕೆ ಇದೀಗ ಶ್ರೀ ಕೃಷ್ಣನ ಜನ್ಮಸ್ಥಾನ ಸೇರಿರುವ ಘಟನೆ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದೆ.

ಅಷ್ಟಕ್ಕೂ ಆತ ಮಾಡಿದ್ದೇನು ಅಂದ್ರೆ, ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ 9 ಶವಗಳನ್ನು ಹೊರತೆಗೆದು ಅವುಗಳ ಜೊತೆ ಸಂಭೋಗ ನಡೆಸಿದ್ದ. ಇಂಥ ಅಮಾನವೀಯ ಕೃತ್ಯವೆಸಗಿದ ಕಾಸಿಂ ಖುರಮ್‌ನಿಗೆ 6 ವರ್ಷಗಳ ಕಾಲ ಸಜೆ ವಿಧಿಸಲಾಗಿದೆ.

ಅಲ್ಲದೆ, ಇದೊಂದು ಮಾನವನ ಸಂವೇದನಾ ಶೀಲತೆಯನ್ನೇ ಅಣುಕ ಮಾಡಿದಂತಿದೆ ಎಂದು ಕೋರ್ಟ್‌ ಹೇಳಿದೆ.