ಚುನಾವಣೆ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯಗೆ ಭೂ ಕಂಟಕ ಎದುರಾಗಿದೆ. ಸಿಎಂ ವಿರುದ್ಧ ಡಿನೋಟಿಫಿಕೇಶನ್ ಆರೋಪ ಕೇಳಿ ಬಂದಿದೆ.

ಬೆಂಗಳೂರು (ಡಿ.25): ಚುನಾವಣೆ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯಗೆ ಭೂ ಕಂಟಕ ಎದುರಾಗಿದೆ. ಸಿಎಂ ವಿರುದ್ಧ ಡಿನೋಟಿಫಿಕೇಶನ್ ಆರೋಪ ಕೇಳಿ ಬಂದಿದೆ.

ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ರಾಜ್ಯಪಾಲರನ್ನು ಭೇಟಿ ಮಾಡಿದ್ದು ಕಾಂಗ್ರೆಸ್ ನಾಯಕರಿಗೆ ನಡುಕ ಉಂಟಾಗಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್'ಗೆ ಬಿಜೆಪಿ ಅನುಮತಿ ಕೋರಿದೆ.

ಇದರ ಬೆನ್ನಲ್ಲೇ ದಿನೇಶ್ ಗುಂಡೂರಾವ್, ಹಾಗೂ ವಿ ಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ.

ರಾಜ್ಯಪಾಲರು ಬಿಜೆಪಿಯ ಒತ್ತಡಕ್ಕೆ ಮಣಿಯಬಾರದು. ಬಿಜೆಪಿ ನಾಯಕರು ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ. ರಾಜ್ಯಪಾಲರು ಈ ರೀತಿಯ ಸುಳ್ಳು ಆರೋಪಿಗಳನ್ನು ನಂಬಲೇಬಾರದು. ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯಪಾಲರು ಒತ್ತಡಕ್ಕೆ ಮಣಿಯಬಾರದು. ಒಮ್ಮೆ ಅನುಮತಿ ಕೊಟ್ಟರೆ ಅದು ದುರುದ್ದೇಶ ಆಗುತ್ತದೆ. ಆಧಾರ ರಹಿತ ಆರೋಪಕ್ಕೆ ಮಣೆ ಹಾಕಬಾರದು ಎಂದು ಉಗ್ರಪ್ಪ ಹೇಳಿದ್ದಾರೆ.