ದರ್ಶನ್ ಮತ್ತು ಸುದೀಪ್ ಮಧ್ಯೆ ಈಗ್ಗೆ ಹಲವು ದಿನಗಳಿಂದ ಶೀತಲ ಸಮರವಿತ್ತೆಂಬ ಮಾತು ಸ್ಯಾಂಡಲ್ವುಡ್'ನಲ್ಲಿ ಹರಿದಾಡುತ್ತಿತ್ತು.
ಬೆಂಗಳೂರು(ಮಾ. 05): ಬಹಳ ದಿನಗಳಿಂದ ಹೊಗೆಯಾಡುತ್ತಿದ್ದ ಸುದ್ದಿ ಮತ್ತು ಆತಂಕವೊಂದು ನಿಜವಾದಂತಿದೆ. ಸ್ಯಾಂಡಲ್ವುಡ್'ನ ಕುಚುಕು ಸ್ನೇಹಿತರೆಂದೇ ಕರೆಯಲ್ಪಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸ್ನೇಹ ಮುರಿದುಬಿದ್ದಿದೆ. ಹಾಗಂತ, ದರ್ಶನ್ ತೂಗುದೀಪ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆನ್ನಲಾಗಿದೆ. ದರ್ಶನ್ ತೂಗುದೀಪ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ಬಾಂಬ್ ಸಿಡಿಸಲಾಗಿದೆ.
"ನಾನು ಮತ್ತು ಸುದೀಪ್ ಸ್ನೇಹಿತರಾಗಿ ಉಳಿದಿಲ್ಲ. ನಾವಿಬ್ಬರು ಕನ್ನಡ ಚಿತ್ರರಂಗಕ್ಕಾಗಿ ಕೆಲಸ ಮಾಡುತ್ತಿರುವ ನಟರಷ್ಟೇ. ಮತ್ಯಾವುದೇ ಊಹಾಪೋಹಗಳು ಬೇಡ. ಇಲ್ಲಿದೆ ಇದು ಸಾಕು" ಎಂದು ದರ್ಶನ್ ತೂಗುದೀಪರ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.
ದರ್ಶನ್ ಮತ್ತು ಸುದೀಪ್ ಮಧ್ಯೆ ಈಗ್ಗೆ ಹಲವು ದಿನಗಳಿಂದ ಶೀತಲ ಸಮರವಿತ್ತೆಂಬ ಮಾತು ಸ್ಯಾಂಡಲ್ವುಡ್'ನಲ್ಲಿ ಹರಿದಾಡುತ್ತಿತ್ತು.
