ಮೇಲುಕೋಟೆ ಕ್ಷೇತ್ರದಿಂದ ಪುಟ್ಟಣ್ಣಯ್ಯ ಪುತ್ರ ಸ್ಪರ್ಧೆ?

First Published 25, Feb 2018, 3:26 PM IST
Darshan Puttannaiah Likely To Contest Election
Highlights

ವಿಧಾನಸಭಾ ಚುನಾವಣೆ ವೇಳೆ ಮೇಲುಕೋಟೆಯಿಂದ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದನ್ನು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ

ಮಂಡ್ಯ: ವಿಧಾನಸಭಾ ಚುನಾವಣೆ ವೇಳೆ ಮೇಲುಕೋಟೆಯಿಂದ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದನ್ನು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಇತ್ತೀಚೆಗಷ್ಟೇ ನಿಧನರಾದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯರ ಪುತ್ರ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ತಂದೆಯ ನಿಧನದ ನಂತರ ನನ್ನೊಂದಿಗೆ ಸಾಕಷ್ಟು ಹಿರಿಯರು, ಹಿತೈಷಿಗಳು ಮಾತನಾಡಿದ್ದಾರೆ. ಮುಂದಿನ ಭವಿಷ್ಯ ಯಾವ ಹಾದಿಯಲ್ಲಿ ಸಾಗಬೇಕು ಎಂಬುದು ಕೂಡ ನಮಗೂ ಒಂದು ಚರ್ಚೆಯ ಸಂಗತಿಯಾಗಿದೆ. ಹೀಗಾಗಿ ಮುಂದಿನ ಚುನಾವಣೆ ಮತ್ತು ರಾಜಕೀಯ ನಿರ್ಧಾರದ ಚರ್ಚಿಸುವುದಾಗಿ ಹೇಳಿದರು.

ರೈತಸಂಘ ನಾಯಕ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಕಳೆದ ಫೆ.18ರಂದು ನಿಧನರಾಗಿದ್ದಾರೆ.  ವಿಧಿವಶರಾಗಿದ್ದಾರೆ. 1994 ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ, ಪುಟ್ಟಣ್ಣಯ್ಯ 2013ರಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧಿಸಿ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ರೈತರ ಹಿತಾಸಕ್ತಿ ಕಾಪಾಡಲು,  ಕಾವೇರಿ ನದಿ ನೀರು ವಿಚಾರದಲ್ಲಿ ಪುಟ್ಟಣ್ಣಯ್ಯ ನಿರಂತರ ಹೋರಾಟ ಮಾಡಿದ್ದರು.

loader