ಕೊರೋನಾ ಆತಂಕದ ನಡುವೆ, ಓಝೋನ್ ಪದರದಲ್ಲಿ ದೊಡ್ಡ ರಂಧ್ರ..!
ಒಂದು ಕಡೆ ಕೊರೋನಾದಿಂದಾಗಿ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಹೀಗಿರುವಾಗಲೇ ಓಝೋನ್ ಪದರದಲ್ಲಿ ರಂಧ್ರವಾಗಿದೆ ಎನ್ನುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಲಂಡನ್(ಏ.10): ಒಂದು ಕಡೆ ಕೊರೋನಾ ವೈರಸ್ ಎನ್ನುವ ಡೆಡ್ಲಿ ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಶಾಕ್ ಪ್ರಕೃತಿ ನೀಡಲು ಮುಂದಾಗಿದೆ. ಸೂರ್ಯನ ವಿಕಿರಣಗಳನ್ನು ತಡೆಯುತ್ತಿದ್ದ ಓಝೋನ್ ಪದರ ರಂಧ್ರವಾಗಿದೆ ಎನ್ನುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಕೊರೋನಾ ಭೀತಿ: ಅಮೆರಿಕ, ಚೀನಾಕ್ಕಿಂತ ಡೇಂಜರ್ ಸ್ಥಿತಿಯಲ್ಲಿ ಭಾರತ..!
ವಿಕಿರಣಗಳಿಂದ ಭೂಮಿಯನ್ನು ಕಾಪಾಡುವ ಓಝೋನ್ ಪದರ ನಿಧಾನವಾಗಿ ಸುಧಾರಣೆಗೊಳ್ಳುತ್ತಿದೆ ಎಂಬ ಇತ್ತೀಚಿನ ವರದಿಗಳ ಬೆನ್ನಲ್ಲೇ, ಆರ್ಕ್ಟ್ರಿಕ್ ಮೇಲ್ಬಾಗದಲ್ಲಿ ಬರುವ ಓಝೋನ್ ವಲಯದಲ್ಲಿ ಭಾರೀ ರಂಧ್ರವೊಂದು ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕೊಪರ್ನಿಕಸ್ ಸೆಂಟಿನೆಲ್ 5ಪಿ ಉಪಗ್ರಹದ ಮಾಹಿತಿ ಆಧರಿಸಿ ವಿಜ್ಞಾನಿಗಳ ತಂಡ ಈ ವರದಿ ಬಿಡುಗಡೆ ಮಾಡಿದೆ.
15 ಸಾವಿರ ಕೋಟಿ ರುಪಾಯಿ ಕೊರೋನಾ ವೈರಸ್ ಪ್ಯಾಕೇಜ್ ಘೋಷಿಸಿದ ಕೇಂದ್ರ
ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಅಂಶಗಳು ವಾಯುಮಂಡಲ ಇರುವ ಓಝೋನ್‌ನ ಭಾಗವಾಗಿರುವ ಸ್ಟ್ರಾಟೋಸ್ಪಿಯರ್ ಮೇಲೆ ಗಂಭೀರ್ ಪರಿಣಾಮ ಬೀರಿದೆ. ಅದರ ಜತೆಗೆ ವಿಲಕ್ಷಣ ಎಂಬಂತೆ ಸ್ಟ್ರಾಟೋಸ್ಪಿಯರ್ ಕೆಳ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಏಕಾಏಕಿ ತಾಪಮಾನ ಭಾರೀ ಕುಸಿತ ಕಂಡಿದೆ. ಇದೆಲ್ಲದರ ಪರಿಣಾಮ ಓಝೋನ್ ವಲಯದಲ್ಲಿ ದೊಡ್ಡ ರಂಧ್ರ ಕಾಣಿಸಿಕೊಂಡಿದೆ.