Asianet Suvarna News Asianet Suvarna News

ಕೊರೋನಾ ಭೀತಿ: ಅಮೆರಿಕ, ಚೀನಾಕ್ಕಿಂತ ಡೇಂಜರ್ ಸ್ಥಿತಿಯಲ್ಲಿ ಭಾರತ..!

ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ  ಲಾಕ್‌ಡೌನ್ ಘೋ‍ಷಿಸಲಾಗಿದೆ. ಹೀಗಿರುವಾಗಲೇ ಸ್ವಲ್ಪ ಮೈಮರೆತರೂ ಅಪಾಯದ ತೂಗುಗತ್ತಿ ತಲೆ ಮೇಲೆರಗಲಿದೆ ಎಂದು ಹೊಸ ಸ್ಟಡಿಯೊಂದು ತಿಳಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

India Coronavirus Situation is Dangerous Warns New Study
Author
New Delhi, First Published Apr 10, 2020, 12:29 PM IST

ನವದೆಹಲಿ(ಏ.10): ಮಾರಕ ಕೊರೋನಾ ಸೋಂಕು ನಿಗ್ರಹದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ 21 ದಿನಗಳ ದೇಶವ್ಯಾಪಿ ಲಾಕ್‌ಡೌನ್ ಮುಕ್ತಾಯವಾದ ದಿನ ಸಮೀಪಿಸುತ್ತಿರುವಂತೆಯೇ, ಭಾರತದಲ್ಲಿನ ಪ್ರಸಕ್ತ ಕೊರೋನಾ ಸ್ಥಿತಿಗತಿಯೂ ವಿಶ್ವದಲ್ಲಿಯೇ ಅತಿಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳಾದ ಅಮೆರಿಕ, ಸ್ಪೇನ್‌ಗಿಂತಲೂ ಗಂಭೀರವಾಗಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

"

ಹೀಗಾಗಿ ಒಂದು ವೇಳೆ ಲಾಕ್‌ಡೌನ್ ನಿಯಮಗಳನ್ನು ಮೀರಿ ಜನತೆ ಬೀದಿಗೆ ಬಂದಿದ್ದೇ ಆದಲ್ಲಿ ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚಿನ ಸಾವು-ನೋವು ಭಾರತದಲ್ಲಿ ಸಂಭವಿಸುವ ಗಂಭೀರ ಆತಂಕವೊಂದು ಎದುರಾಗಿದೆ.

ಗಂಭೀರ ಪರಿಸ್ಥಿತಿ: ವಿದೇಶಗಳಿಗೆ ಹೋಲಿಸಿದರೆ ಮೇಲ್ನೋಟಕ್ಕೆ ಭಾರತದ್ದು ಉತ್ತಮ ಸಾಧನೆ ಎಂದು ಕಂಡು ಬಂದರೂ, ಅಮೆರಿಕ, ಸ್ಪೇನ್ ಮತ್ತು ಚೀನಾದಲ್ಲಿ ಸೋಂಕಿತರ ಸಂಖ್ಯೆ 5000-6000 ಇದ್ದಾಗ, ಸಾವಿನ ಸಂಖ್ಯೆ ಇನ್ನೂ ಕಡಿಮೆ ಇತ್ತು ಎಂದು ದಾಖಲೆಗಳು ಹೇಳಿವೆ. ಹೀಗಾಗಿ ಸೋಂಕು ನಿಗ್ರಹಕ್ಕೆ ಭಾರತ ಇನ್ನಿಲ್ಲದ ಯತ್ನ ಮಾಡಿದ ಹೊರತಾಗಿಯೂ ಪರಿಸ್ಥಿತಿ ಭಾರತದ ಕೈ ಜಾರಿಹೋಗಿದೆಯೇ ಎಂಬ ಅನುಮಾನಕ್ಕೂ ಕಾರವಾಗಿದೆ.

15 ಸಾವಿರ ಕೋಟಿ ರುಪಾಯಿ ಕೊರೋನಾ ವೈರಸ್ ಪ್ಯಾಕೇಜ್ ಘೋ‍ಷಿಸಿದ ಕೇಂದ್ರ

ಒಂದು ವೇಳೆ ಲಾಕ್‌ಡೌನ್ ಇನ್ನಷ್ಟು ದಿನ ವಿಸ್ತರಣೆ ಮಾಡದೇ ಹೋದಲ್ಲಿ ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರದೇ ಹೋದಲ್ಲಿ ಭಾರೀ ಅಪಾಯವೊಂದು ದೇಶದ ಮೇಲೇರುವ ಎಲ್ಲಾ ಸಾಧ್ಯತೆಗಳಿವೆ. ಮುಂದಿನ 10 ದಿನಗಳು ತುಂಬಾ ಮಹತ್ವದ್ದಾಗಿದ್ದು, ಜನತೆ ಕಟ್ಟೆಚ್ಚರ ವಹಿಸಬೇಕಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 100ರಿಂದ 1000ಕ್ಕೆ ತಲುಪಲು 15 ದಿನ ತೆಗೆದುಕೊಂಡಿತ್ತು. ಆದರೆ 1000ದಿಂದ 5000ಕ್ಕೆ ತಲುಪಲು ಕೇವಲ 9 ದಿನ ತೆಗೆದುಕೊಂಡಿದೆ. ಅಂದರೆ 9 ದಿನಗಳಲ್ಲಿ 5ಪಟ್ಟು ಹೆಚ್ಚಿದೆ.

ಇತರೆ ದೇಶಗಳಲ್ಲಿ ಏನಾಗಿತ್ತು?
ಪ್ರತಿ 5 ಸಾವಿರ ಸೋಂಕಿಗೆ ಅತಿಹೆಚ್ಚು ಸಾವು ಸಂಭವಿಸಿದ ದೇಶಗಳ ಪೈಕಿ ಭಾರತ 149 ಸಾವಿನೊಂದಿಗೆ 8ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಸೋಂಕು ಬೆಳಕಿಗೆ ಬಂದಿರುವ ಮತ್ತು ಹೆಚ್ಚು ಸಾವು ಸಂಭವಿಸಿರುವ ದೇಶಗಳಾದ ಫ್ರಾನ್ಸ್‌, ಇರಾನ್, ಚೀನಾ, ಅಮೆರಿಕ ನಂತರದ ಸ್ಥಾನಗಳಲ್ಲಿವೆ! ಇದು ಆತಂಕಕಕಾರಿಯಾಗಿದೆ. 

"

Follow Us:
Download App:
  • android
  • ios