ಡಾನ್ಸ್ ಮಾಸ್ಟರ್ ಕಿರುಕುಳಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್'ನಲ್ಲಿ ನಡೆದಿದೆ.
ಬೆಂಗಳೂರು(ಅ.31): ಡಾನ್ಸ್ ಮಾಸ್ಟರ್ ಕಿರುಕುಳಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್'ನಲ್ಲಿ ನಡೆದಿದೆ.
ನೃತ್ಯ ಕಲಿಯೋಕೆ ಅಂತ ಕ್ಲಾಸ್'ಗೆ ಬರ್ತಿದ್ದ ಚಂದನಾಗೆ ಡಾನ್ಸ್ ಮಾಸ್ಟರ್ ಸತೀಶ ನಿತ್ಯ ಕಿರುಕುಳ ನೀಡ್ತಿದ್ದ. ಇದ್ರಿಂದ ಬೇಸತ್ತ 12 ವರ್ಷದ ಚಂದನಾ, ನಿನ್ನೆ ತಡರಾತ್ರಿ ಡಾನ್ಸ್ ಕ್ಲಾಸ್'ನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಬಾಲಕಿ ಕಡೆಯವರು, ಡಾನ್ಸ್ ಮಾಸ್ಟರ್ ಸತೀಶನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಸಂಬಂಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
