ತಾವು ಪ್ರಧಾನಿಯಾಗ ಬೇಕು ಎಂಬ ಸ್ವಯಂ ಕೇಂದ್ರಿತ ಗುಣ ನೆಹರೂ ಅವರಿಗಿತ್ತು ಎಂಬುದು ನನ್ನ ಅಭಿಪ್ರಾಯ. ಮಹಾತ್ಮಾ ಗಾಂಧೀಜಿಯವರ ಇಚ್ಛೆ ಈಡೇರಿದ್ದರೆ, ಭಾರತ ಮತ್ತು ಪಾಕಿಸ್ತಾನ ಒಂದೇ ಆಗಿರುತಿತ್ತು’ 

ಪಣಜಿ[ಆ.09]: ಮುಹಮದ್ ಆಲಿ ಜಿನ್ನಾರನ್ನು ಭಾರತದ ಪ್ರಥಮ ಪ್ರಧಾನಿಯಾಗಿಸಲು ಮಹಾತ್ಮ ಗಾಂಧಿಯ ವರಿಗೆ ಇಷ್ಟವಿತ್ತಾದರೂ, ಜವಾಹರಲಾಲ್ ನೆಹರೂ ರವರಿಗೆ ಇಷ್ಟವಿರಲಿಲ್ಲ ಎಂದು ಟಿಬೆಟಿಗರ ಧಾರ್ಮಿಕ ಗುರು ದಲೈ ಲಾಮಾ ಹೇಳಿದ್ದಾರೆ.

ಗೋವಾದ ಸಂಖಲಿಮ್ ನಗರದಲ್ಲಿ ಗೋವಾ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಈ
ವಿಷಯ ತಿಳಿಸಿದರು. ‘ಕೆಲವೇ ಜನರು ನಿರ್ಧಾರ ಕೈಗೊಳ್ಳುವಂತಹ ಅಪಾಯಕಾರಿ ವ್ಯವಸ್ಥೆಯಾದ ಊಳಿಗ ಮಾನ್ಯ ಪದ್ಧತಿಗಿಂತ ಪ್ರಜಾಪ್ರಭುತ್ವ ವ್ಯವಸ್ಥೆ ತುಂಬಾ ಉತ್ತಮವಾದುದು. ಈಗ ಭಾರತದ ವಿಷಯವೇ ತೆಗೆದುಕೊಳ್ಳಿ, ಜಿನ್ನಾರನ್ನು ಪ್ರಧಾನಿ ಮಾಡುವುದಕ್ಕೆ ಮಹಾತ್ಮಾ ಗಾಂಧೀಜಿಗೆ ತುಂಬಾ ಇಷ್ಟವಿತ್ತು. ಆದರೆ ಪಂಡಿತ್ ನೆಹರೂ ಇದಕ್ಕೆ ನಿರಾಕರಿಸಿದರು.

ತಾವು ಪ್ರಧಾನಿಯಾಗ ಬೇಕು ಎಂಬ ಸ್ವಯಂ ಕೇಂದ್ರಿತ ಗುಣ ನೆಹರೂ ಅವರಿಗಿತ್ತು ಎಂಬುದು ನನ್ನ ಅಭಿಪ್ರಾಯ. ಮಹಾತ್ಮಾ ಗಾಂಧೀಜಿಯವರ ಇಚ್ಛೆ ಈಡೇರಿದ್ದರೆ, ಭಾರತ ಮತ್ತು ಪಾಕಿಸ್ತಾನ ಒಂದೇ ಆಗಿರುತಿತ್ತು’ ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಅವರು ಉತ್ತರಿಸಿದರು.