ಎದೆಯಲ್ಲಿ ಸೋಂಕು ಹಿನ್ನೆಲೆ: ದಲೈಲಾಮಾ ಆಸ್ಪತ್ರೆಗೆ ದಾಖಲು| 

ನವದೆಹಲಿ[ಏ.11]: ಬೌದ್ಧರ ಧರ್ಮ ಗುರು ದಲೈಲಾಮಾ (83), ಎದೆ ಸೋಂಕಿನಿಂದ ಬಳಲುತ್ತಿದ್ದು, ಅವರನ್ನು ಇಲ್ಲಿನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ ಕೆಲವು ದಿನ ಅವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಸೋಮವಾರವಷ್ಟೇ ಹಿಮಾಚಲಪ್ರದೇಶದ ಧರ್ಮಶಾಲಾಕ್ಕೆ ಮರಳಿದ್ದ ದಲೈಲಾಮಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪರಿಶೀಲನೆಗೆಂದು ದೆಹಲಿಗೆ ಕರೆತಂದ ವೇಳೆ ಎದೆ ಸೋಂಕು ಪತ್ತೆಯಾಗಿದೆ.

ಈ ನಡುವೆ ನೂತನ ದಲೈಲಾಮಾರ ಆಯ್ಕೆ ತನ್ನ ಅನುಮತಿ ಇಲ್ಲದೇ ಆಗುವಂತಿಲ್ಲ ಎಂದು ಚೀನಾ ಬುಧವಾರ ಪ್ರತಿಕ್ರಿಯೆ ನೀಡಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.