ಬಂಟ್ವಾಳದಲ್ಲಿ  ನಡೆದ ಗಲಭೆ ಪ್ರಕರಣ ರಾಜಕೀಯ ಸಂಘರ್ಷಕ್ಕೆ ತಿರುಗಿದೆ. ಕರಾವಳಿಯಲ್ಲಿ  ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೂ, ರಾಜಕೀಯ ನಾಯಕರ ವಾಕ್ಸಮರ ಮಾತ್ರ ನಿಂತಿಲ್ಲ. ಸೋಮವಾರದಂದು ಸಂಸದೆ ಶೋಭಾ ಕರಂದ್ಲಾಜೆ, ಗಲಭೆ ನಡೆಯುತ್ತಿದ್ದರೂ ಕೈಕೊಟ್ಟಿ ಕುಳಿತುಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯವರೇನೂ ಷಂಡರಾ ಅಂತಾ ಹೇಳಿದ್ದರು. ಇದಕ್ಕೆ ಸಿಎಂ ನಿನ್ನೆ ತಿರುಗೇಟು ನೀಡಿದ್ದಾರೆ.

ಮಂಗಳೂರು(ಜು.12): ಬಂಟ್ವಾಳದಲ್ಲಿ ನಡೆದ ಗಲಭೆ ಪ್ರಕರಣ ರಾಜಕೀಯ ಸಂಘರ್ಷಕ್ಕೆ ತಿರುಗಿದೆ. ಕರಾವಳಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೂ, ರಾಜಕೀಯ ನಾಯಕರ ವಾಕ್ಸಮರ ಮಾತ್ರ ನಿಂತಿಲ್ಲ. ಸೋಮವಾರದಂದು ಸಂಸದೆ ಶೋಭಾ ಕರಂದ್ಲಾಜೆ, ಗಲಭೆ ನಡೆಯುತ್ತಿದ್ದರೂ ಕೈಕೊಟ್ಟಿ ಕುಳಿತುಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯವರೇನೂ ಷಂಡರಾ ಅಂತಾ ಹೇಳಿದ್ದರು. ಇದಕ್ಕೆ ಸಿಎಂ ನಿನ್ನೆ ತಿರುಗೇಟು ನೀಡಿದ್ದಾರೆ.

ನಿನ್ನೆ ಕೂಡಾ ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಕಾನೂನು ಸುವ್ಯವಸ್ಥೆ ಕಾಪಾಡೋದಕ್ಕೆ ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಅಂತ ಕಿಡಿಕಾರಿದರು. ಮಂಗಳೂರಿಗೆ ನೀವೇ ಹೋಗಿ ಅಂತಾ ಕಾನೂನು ಸಲಹೆಗಾರ ಕೆಂಪಯ್ಯಗೆ ಸಿಎಂ ಸೂಚಿಸಿರುವುದು , ಅಧಿಕಾರಿಗಳ ಆತ್ಮವಿಶ್ವಾಸವನ್ನು ಕುಗ್ಗಿಸಿದೆ ಅಂತಾ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು .

ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ಇಲ್ಲವೋ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಷಂಡ ಪದ ಬಳಕೆ ಮೂಲಕ ಶೋಭಾ ಕರಂದ್ಲಾಜೆ ಸೌಹಾರ್ಧತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡಾ ಹರಿಹಾಯ್ದಿದ್ದಾರೆ

ಒಟ್ಟಿನಲ್ಲಿ ಕರಾವಳಿ ಶಾಂತಿ ಸಹಜ ಸ್ಥಿತಿಗೆ ಮರಳಿದರೂ, ರಾಜಕೀಯ ನಾಯಕರ ಕೆಸರೆರಚಾಟ ಮಾತ್ರ ನಿಂತಿಲ್ಲ.