ಆಮೆಗತಿಯಲ್ಲಿ ಸಾಗುತ್ತಿರುವ ವಿಚಾರವಾದಿ  ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಸಿಬಿಐ ತನಿಖೆಯಿಂದ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದ್ದು ಜ. 20ರೊಳಗೆ ಸಂಪೂರ್ಣ ವರದಿ ನೀಡುವಂತೆ ಸಿಬಿಐಗೆ ಹೇಳಿದೆ.

ಮುಂಬೈ (ಡಿ.16): ಆಮೆಗತಿಯಲ್ಲಿ ಸಾಗುತ್ತಿರುವ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಸಿಬಿಐ ತನಿಖೆಯಿಂದ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದ್ದು ಜ. 20ರೊಳಗೆ ಸಂಪೂರ್ಣ ವರದಿ ನೀಡುವಂತೆ ಸಿಬಿಐಗೆ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ತಿಂಗಳ ಆರಂಭದಲ್ಲಿ ಸಿಬಿಐ, ಬಾಂಬೆ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿ ತನಿಖೆಗೆ ತಡೆ ನೀಡಬೇಕು ಎಂದು ಕೋರಿತ್ತು. ಜೊತೆಗೆ ಹೆಚ್ಚಿನ ಪುರಾವೆ ಒದಗಿಸಲು ಕಾಲಾವಕಾಶ ಬೇಕು ಎಂದು ಕೋರಿತ್ತು.

2013 ಆ. 20 ರಂದು ಪುಣೆಯಲ್ಲಿ ದಾಬೋಲ್ಕರ್ ಹತ್ಯೆ ನಡೆದಿತ್ತು. ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ವೀರೇಂದ್ರ ಸಿಂಗ್ ತಾವಡೆಯವರನ್ನು ಬಂಧಿಸಿತ್ತು.