ತಿನ್ನಲು ಆಹಾರ ಸಿಗದೆ ಪರದಾಡುವ ಸ್ಥಿತಿ ಬಂದಿದೆ. ಎರಡು ಮೂರು ದಿನಗಳಿಂದ ಚಿಲ್ಲರೆ ಹಣ ಸಿಗದೆ ಹಳೆಯ ನೋಟುಗಳ ಬದಲಾವಣೆಯಾಗದೆ  ಇರುವುದರಿಂದ ಆಕ್ರೋಶಗೊಂಡ ಜನ ನ್ಯಾಯಬೆಲೆ ಅಂಗಡಿಗೆ ನುಗ್ಗಿ  ಗೋಧಿ  ಅಕ್ಕಿ ಸಕ್ಕರೆಯನ್ನು ಹೊತ್ತೊಯ್ದಿದ್ದಾರೆ.

ಭೋಪಾಲ್​ (ನ.12): ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನ ಕಂಗಾಲಾಗಿದ್ದಾರೆ.

ತಿನ್ನಲು ಆಹಾರ ಸಿಗದೆ ಪರದಾಡುವ ಸ್ಥಿತಿ ಬಂದಿದೆ. ಎರಡು ಮೂರು ದಿನಗಳಿಂದ ಚಿಲ್ಲರೆ ಹಣ ಸಿಗದೆ ಹಳೆಯ ನೋಟುಗಳ ಬದಲಾವಣೆಯಾಗದೆ ಇರುವುದರಿಂದ ಆಕ್ರೋಶಗೊಂಡ ಜನ ನ್ಯಾಯಬೇಲೆ ಅಂಗಡಿಗೆ ನುಗ್ಗಿ ಗೋಧಿ ಅಕ್ಕಿ ಸಕ್ಕರೆಯನ್ನು ಹೊತ್ತೊಯ್ದಿದ್ದಾರೆ..

ಮಧ್ಯಪ್ರದೇಶದ ಭೊಪಾಲ ಜಿಲ್ಲೆಯ ಬರಡ್ವಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ . ಅಂಗಡಿಯ ಮಾಲಿಕ 500 ಹಾಗೂ 1000 ರುಪಾಯಿ ನೋಟ್ ಅನ್ನು ಪಡೆಯದೆ ಇರುವುದರಿಂದ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.