ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳು ಜಾರಿಗೆ ತಂದಿರುವ ‘ಮದುವೆಗಾಗಿ ಮತಾಂತರ ನಿಷೇಧ’ ಕುರಿತು ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿದೆ. ಕ್ಯಾಪಿಟಲ್ ಹಿಲ್‌ನಲ್ಲಿ ಟ್ರಂಪ್ ಬೆಂಬಲಿಗರು ನಡೆದುಕೊಂಡ ರೀಈತಿ ಬಳಿಕ ವಾಷಿಂಗ್ಟನ್‌ನಲ್ಲಿ ಪಬ್ಲಿಕ್ ಎಮರ್ಜೆನ್ಸಿ ಘೋಷಿಸಲಾಗಿದೆ. ವೇದಿಕೆ ಮೇಲೆ ನಟಿ ನಿಧಿ ಜತೆ ಅಸಭ್ಯ ವರ್ತನೆ ತೋರಿದ ನಿರ್ದೇಶಕನ ವಿಡಿಯೋ ವೈರಲ್ ಆಗಿದೆ. ರತನ್ ಟಾಟಾ ಕಾರು ನಂಬರ್ ಫೋರ್ಜರಿ ಮಾಡಿದ ಮಹಿಳೆ, ರಶ್ಮಿಕಾ ಮಂದಣ್ಣ ಮನೆಗೆ ಹೊಸ ಅತಿಥಿ ಸೇರಿದಂತೆ ಜನವರಿ 7ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ರೇಪ್ ಮಾಡಲು ಬಂದ ಕಸಿನ್ ಕೊಂದ ಯುವತಿಯ ಬಂಧಿಸದೆ ಬಿಟ್ಟು ಕಳಿಸಿದ ಪೊಲೀಸ್!...
ಬಹಿರ್ದೆಸೆಗೆ ತೆರಳಿದ್ದನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ. ಆತ್ಮ ರಕ್ಷಣೆಗಾಗಿ ಹತ್ಯೆ ಮಾಡಿದಳು/ ಯುವತಿಯನ್ನು ಬಂಧಿಸದೆ ಬಿಟ್ಟು ಕಳಿಸಿದ ಪೊಲೀಸರು/ ತಮಿಳುನಾಡಿನ ಪ್ರಕರಣ.
ಲವ್ ಜಿಹಾದ್ ನಿಷೇಧ ಕಾಯ್ದೆ ಸುಪ್ರೀಂ ಅಂಗಳಕ್ಕೆ!...
ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳು ಜಾರಿಗೆ ತಂದಿರುವ ‘ಮದುವೆಗಾಗಿ ಮತಾಂತರ ನಿಷೇಧ’ ಕಾಯ್ದೆಗಳು ಸಂವಿಧಾನಬದ್ಧವಾಗಿವೆಯೇ ಇಲ್ಲವೇ ಎಂಬುದನ್ನು ಪರಾಮರ್ಶಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ಪೀಠ ಎರಡೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.
ನಾಲ್ಕು ಸಾವು, 52 ಅರೆಸ್ಟ್, ಪಬ್ಲಿಕ್ ಎಮರ್ಜೆನ್ಸಿ: ಕ್ಯಾಪಿಟಲ್ ಹಿಲ್ ದಾಳಿ ಬಳಿಕ ಮಹತ್ವದ ಕ್ರಮ!...
ಕ್ಯಾಪಿಟಲ್ ಹಿಲ್‌ನಲ್ಲಿ ಟ್ರಂಪ್ ಬೆಂಬಲಿಗರು ನಡೆದುಕೊಂಡ ರೀಈತಿ ಬಳಿಕ ವಾಷಿಂಗ್ಟನ್‌ನಲ್ಲಿ ಪಬ್ಲಿಕ್ ಎಮರ್ಜೆನ್ಸಿ ಘೋಷಿಸಲಾಗಿದೆ. ವಾಷಿಂಗ್ಟನ್ ಮೇಯರ್ ಅನ್ವಯ ಮುಂದಿನ ಹದಿನೈದು ದಿನಗಳವರೆಗೆ ಎಮರ್ಜೆನ್ಸಿ ವಿಸ್ತರಿಸಲಾಗಿದೆ. ಇನ್ನು ಈವರೆಗೆ ಒಟ್ಟು ನಾಲ್ವರು ಸಾವನ್ನಪ್ಪಿದ್ದು, 52 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ
ಸಿಡ್ನಿ ಟೆಸ್ಟ್: ಮಳೆ ನಡುವೆ ಮಿಂಚಿದ ಆಸೀಸ್ ಬ್ಯಾಟ್ಸ್‌ಮನ್‌ಗಳು...
ಮಳೆಯ ಅಡಚಣೆಯ ನಡುವೆಯೇ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಭಾರತದೆದುರು ಕೊಂಚ ಮೇಲುಗೈ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.
ವೇದಿಕೆ ಮೇಲೆ ನಟಿ ನಿಧಿ ಜತೆ ಅಸಭ್ಯ ವರ್ತನೆ: ನಿರ್ದೇಶಕನ ವಿಡಿಯೋ ವೈರಲ್!...
ಟಾಲಿವುಡ್‌ನಲ್ಲಿ ಒಂದಾದ ಮೇಲೊಂದು ಸಿನಿಮಾ ಕಾರ್ಯಕ್ರಮಗಳು ಭರ್ಜರಿಯಾಗಿ ಶುರುವಾಗಿವೆ. ಇತ್ತೀಚಿಗೆ ನಡೆದ 'ಈಶ್ವರನ್' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನಡೆದ ಘಟನೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವೇ ನಟಿ ನಿಧಿ ಅಗರ್ವಾಲ್ ಹೊಂದಿರುವ ಅಪಾರ ಸಂಖ್ಯೆಯ ಅಭಿಮಾನಿಗಳು..
ತಮ್ಮ ನಾಯಕರ ವಿರುದ್ಧವೇ ಸಿಡಿದೆದ್ದ JDS ಶಾಸಕ: ಪಕ್ಷ ತೊರೆಯುವ ಪರೋಕ್ಷ ಎಚ್ಚರಿಕೆ...
ಯಾರೆ ಜೆಡಿಎಸ್ ಪಕ್ಷ ತೊರೆದರೂ ತಮಗೇನು ಧಕ್ಕೆಯಾಗುವುದಿಲ್ಲ, ಹೋಗುವವರಿದ್ದರೆ ಹೋಗಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಈ ಷರತ್ತಿಗೆ ಒಪ್ಪದಿದ್ದರೆ ಫೆ.8ರಿಂದ ವಾಟ್ಸಾಪ್ ಬಂದ್: ಸದ್ದಿಲ್ಲದೆ ಹೊಸ ನಿಯಮ!...
ಫೇಸ್‌ಬುಕ್ ಒಡೆತನದ ವಾಟ್ಸಾಪ್ ಮೆಸೇಜಿಂಗ್ ಆ್ಯಪ್ ಸದ್ದಿಲ್ಲದೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ಇದನ್ನು ಒಪ್ಪಿಕೊಂಡರೆ ಮಾತ್ರ ಫೆಬ್ರವರಿ 8ರಿಂದ ನೀವು ವಾಟ್ಸಾಪ್ ಉಪಯೋಗಿಸಬಹುದು. ಇಲ್ಲದಿದ್ದರೆ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಫೇಸ್‌ಬುಕ್ ಹಾಗೂ ಅದರ ಅಧೀನದಲ್ಲಿರುವ ಸೋಷಿಯಲ್ ಮೀಡಿಯಾಗಳ ಜೊತೆಗೆ ವಾಟ್ಸ್‌ಆ್ಯಪ್ ಬಳಕೆದಾರರು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿಗೆ ನೀಡುವುದೇ ಈ ಹೊಸ ನಿಯಮವಾಗಿದೆ.
ರತನ್ ಟಾಟಾ ಕಾರು ನಂಬರ್ ಫೋರ್ಜರಿ ಮಾಡಿದ ಮಹಿಳೆ; BMW ಸೀಝ್, ಮಹಿಳೆ ಅರೆಸ್ಟ್!...
ಭಾರತದ ಶ್ರೀಮಂತ ಉದ್ಯಮಿ, ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ ಸಾಮಾಜಿಕ ಕಳಕಳಿ, ಸಮಾಜ ಸೇವೆ, ಮಾನವೀಯತೆಗೆ ತಲೆಬಾಗಲೇಬೇಕು. ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ರತನ್ ಟಾಟಾಗೆ ಇದೀಗ ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ಮೋಸ ಮಾಡಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಮಹಿಳೆಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ಮೊದಲ ಕಾರು ಕೊಂಡಾಗ ಸಾಥ್ ನೀಡಿದ್ದ ರಕ್ಷಿತ್, ಇದೀಗ ಮತ್ತೊಂದು ಐಷಾರಾಮಿ ಕಾರು ಕೊಂಡ ರಶ್ಮಿಕಾ...
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗವನ್ನು ಆಳುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ವರ್ಷಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಸಂಭಾವನೆ ಕೋಟಿ ಮುಟ್ಟಿದೆ ಅಂದ್ಮೇಲೆ ಮನೆಗೆ ಬಂದ ಅತಿಥಿ ಬೆಲೆಯೂ ಅಷ್ಟೇ ಇರಬೇಕಲ್ವಾ?
ಹೆತ್ತ ಮಗನಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಮಹಿಳೆ ಅರೆಸ್ಟ್!...
ಹೆತ್ತ ಮಗನಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ತಾಯಿ/ ಪೊಲೀಸರಿಗೆ ದೂರು ಕೊಟ್ಟ ತಂದೆ/ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ/ ಕೇರಳದಿಂದ ಪ್ರಕರಣ ವರದಿ
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Jan 7, 2021, 4:56 PM IST