ಚೆನ್ನೈ(ಜ.  06) ಇದೊಂದು ವಿಶಿಷ್ಟ ಪ್ರಕರಣ. ತಿರುವಳ್ಳೂರ್ ಪೊಲೀಸ್ ವರಿಷ್ಠಾಧಿಕಾರಿ ತೆಗೆದುಕೊಂಡ ಕ್ರಮಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶ್ಲಾಘನೆಗಳು ಹರಿದು ಬರುತ್ತಿವೆ.  ಎಸ್‌ಪಿ ಪಿ ಅರವಿಂದನ್ ಅಂಥದ್ದೊಂದು ಕೆಲಸ ಮಾಡಿದ್ದಾರೆ.

ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದ ಸೋದರ ಸಂಬಂಧಿಯನ್ನು ಯುವತಿ ಕೊಲೆಮಾಡಿದ್ದಳು. ಈ ಮಾಃಇತಿ ಪೊಲೀಸರವರೆಗೆ ಹರಿದು ಬರುತ್ತದೆ. ಅದರಂತೆ  ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಯುವತಿಯನ್ನು ಬಂಧಿಸದೆ ಬಿಟ್ಟು ಕಳಿಸಿದ್ದಾರೆ.

ಯುವತಿ  ಬಹಿರ್ದೆಸೆಗೆ ಹೊರಗೆ ತೆರಳಿದ್ದಾಗ ಚಾಕು ಹಿಡಿದು ಬಂದ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣಗೆ ಮುಂದಾದ ಯುವತಿ ಅದೇ ಚಾಕುವಿನಿಂದ ಆತನ ಹತ್ಯೆ ಮಾಡಿದ್ದಾಳೆ.

ಮಹಿಳೆ ಮೇಲೆ ಧರ್ಮ ಗುರು ಮತ್ತು ಆತನ ಕಾಮಾಂಧ ಶಿಷ್ಯರ ಅಟ್ಟಹಾಸ

ಕೆಲ ತಿಂಗಳ ಹಿಂದೆಯೂ ಹತನಾದ ಕಾಮುಕ ಯುವತಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ.  ಯುವತಿ ಪೊಲೀಸರಿಗೆ ನಡೆದ ಎಲ್ಲ ಘಟನೆಯನ್ನು ವಿವರಿಸಿದ್ದು ಆತ್ಮ ರಕ್ಷಣೆ ಮಾಡಿಕೊಳ್ಳಲು ಇಂಥ ಕ್ರಮ ತೆಗೆದುಕೊಂಡಿದ್ದಾಳೆ ಎಂಬ ಆಧಾರದಲ್ಲಿ ಆಕೆಯನ್ನು ಬಂಧಿಸಿಲ್ಲ.

ಸುಪ್ರೀಂ ಕೋರ್ಟ್ ನ ಕೆಲವು ತೀರ್ಮಾನಗಳು, ಸೆಕ್ಷನ್  100  ಅಡಿ ಸಿಗುವ ವಿನಾಯಿತಿ ಎಲ್ಲದರ ಆಧಾರದ ಮೇಲೆ ಯುವತಿಯನ್ನು  ಬಂಧಿಸಲಾಗಿಲ್ಲ.