ತಿರುವನಂತಪುರಂ(ಜ.  07) ಇದು ಕೊಂಚ ವಿಚಿತ್ರ ಜತೆಗೆ ಉಲ್ಟಾ ಪ್ರಕರಣ. ತನ್ನ ಮಗನ ಮೇಲೆಯೇ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಮಾಡಿದ ತಾಯಿಯನ್ನು ಪೋಕ್ಸೊ  ಕಾಯ್ದೆಯಡಿ ಬಂಧಿಸಲಾಗಿದೆ.

ಕೇರಳದ ತಿರುವನಂತಪುರಂ ಜಿಲ್ಲೆಯ ಕಡಕ್ಕವೂರಿನಿಂದ ಪ್ರಕರಣ ವರದಿಯಾಗಿದ್ದು ರಾಜ್ಯದಲ್ಲಿ  ಇದು ಇಂತಹ ಮೊದಲ ಘಟನೆ.  ಮುಂಬೈನಲ್ಲಿ ಯುವತಿಯರಿಬ್ಬರು ಹುಡುಗನನ್ನು ಅಪಹರಣ ಮಾಡಿದ್ದು  ಹಿಂದೊಮ್ಮೆ ಸುದ್ದಿಯಾಗಿತ್ತು.

ಮಕ್ಕಳ ಮೊಬೈಲ್‌ಗೆ ಬಂತು ಹೆತ್ತಮ್ಮನ  ಬೆತ್ತಲೆ ಪೋಟೋಗಳು

 ತಾಯಿಯೇ ಮಗನಿಗೆ ಕೆಲ ಸಮಯದಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಹುಡುಗನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.  ದೂರನ್ನು ಮಕ್ಕಳ ಕಲ್ಯಾಣ ಆಯೋಗಕ್ಕೆ ರವಾನಿಸಲಾಗಿದ್ದು ಅವರು ಕ್ರಮ ತೆಗೆದುಕೊಂಡಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದ್ದು ನ್ಯಾಯಾಂಗ  ವಶಕ್ಕೆ  ನೀಡಲಾಗಿದೆ.