ಬೆಂಗಳೂರು. [ಆ.26]: ಬಿಎಸ್ ವೈ ಸಂಪುಟ ಸಚಿವರಿಗೆ ಖಾತೆ ಹಂಚೆಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಖಾತೆ ಹಂಚಿಕೆಯಲ್ಲಿ ಅಸಮಾಧಾನ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಸಿ.ಟಿ.ರವಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಪ್ರಮುಖ ಖಾತೆ ಮೇಲೆ ಕಣ್ಣಿಟ್ಟಿದ್ದ  ಸಿ.ಟಿ. ರವಿ ಅವರಿಗೆ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಲಾಗಿದೆ. ಇದರಿಂದ ಬೇಸರಗೊಂಡಿರುವ CT ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

17 ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ಪಕ್ಷ ನಿಷ್ಠೆ ಹಾಗೂ ಹಿರಿತನಕ್ಕೆ ಸೂಕ್ತ ಸ್ಥಾನ ನೀಡದ್ದಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು  ಸ್ವತಃ ಸಿ.ಟಿ.ರವಿ ಅವರು ಸುವರ್ಣನ್ಯೂಸ್ ಗೆ ಖಚಿತಪಡಿಸಿದ್ದಾರೆ. ಸಮಾಜ ಕಲ್ಯಾಣ ಖಾತೆ ನೀಡುವ ಬಗ್ಗೆ ಸಿಎಂ ಕಡೆಯಿಂದ ‌ಮಾಹಿತಿಯಿತ್ತು. ಆದರೆ, ಪ್ರವಾಸೋದ್ಯಮ ಜತೆ ಕನ್ನಡ & ಸಂಸ್ಕೃತಿ ಇಲಾಖೆ ಖಾತೆ ನೀಡಿದ್ದಾರೆ ಎಂದು ರವಿ ಅವರು  ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.