Asianet Suvarna News Asianet Suvarna News

17 ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ 25 ದಿನಗಳ ಬಳಿಕ ಸಚಿವ ಸಂಪುಟ ವಿಸ್ತರಣೆಗೊಂಡಿದ್ದು, ಇದಾದ ಐದು ದಿನಗಳ ಬಳಿಕ ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನೂತನ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ವಿವರ ಈ ಕೆಳಗಿನಂತಿದೆ .
 

Karnataka Cabinet Ministers Portfolios Official List
Author
Bengaluru, First Published Aug 26, 2019, 8:19 PM IST
  • Facebook
  • Twitter
  • Whatsapp

ಬೆಂಗಳೂರು, ಆ.26: ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಒಟ್ಟು 17 ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಬಿ.ಎಸ್‌.ಯಡಿಯೂರಪ್ಪ ಅವರು ಅಳೆದು ತೂಗಿ 17 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು, ಇದೀಗ ಖಾತೆ ಹಂಚಿಕೆಯಲ್ಲೂ ಸಹ ಸಚಿವರ ಸಾಮರ್ಥ ಅನುಗುಣವಾಗಿ ಖಾತೆ  ನೀಡಿದ್ದಾರೆ.  ಹಾಗಾದ್ರೆ ಯಾರಿಗೆ ಯಾವ ಖಾತೆ ಎನ್ನುವುದು ಈ ಕೆಳಗಿನಂತಿದೆ.

1. ಆರ್.ಅಶೋಕ್ – ಕಂದಾಯ ಖಾತೆ
2. ವಿ.ಸೋಮಣ್ಣ – ವಸತಿ
3. ಬಸವರಾಜ್‌ ಬೊಮ್ಮಾಯಿ – ಗೃಹ ಖಾತೆ
4. ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
5. ಜಗದೀಶ್ ಶೆಟ್ಟರ್ – ಬೃಹತ್ & ಮಧ್ಯಮ ಕೈಗಾರಿಕೆ
6. ಲಕ್ಷ್ಮಣ ಸವದಿ – ಸಾರಿಗೆ ಇಲಾಖೆ
7. ಗೋವಿಂದ ಕಾರಜೋಳ – ಲೋಕೋಪಯೋಗಿ, ಸಮಾಜ ಕಲ್ಯಾಣ 
8. ಡಾ. ಅಶ್ವತ್ಥ್‌ ನಾರಾಯಣ – ಉನ್ನತ ಶಿಕ್ಷಣ & ಐಟಿ-ಬಿಟಿ 
9. ಜೆ.ಸಿ. ಮಾಧುಸ್ವಾಮಿ – ಕಾನೂನು & ಸಂಸದೀಯ, ಸಣ್ಣ ನೀರಾವರಿ
10. ಬಿ. ಶ್ರೀರಾಮುಲು – ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ
11. ಸುರೇಶ್ ಕುಮಾರ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 
12. ಪ್ರಭು ಚೌಹಾಣ್‌ – ಪಶು ಸಂಗೋಪನಾ ಖಾತೆ
13. ಹೆಚ್. ನಾಗೇಶ್ – ಅಬಕಾರಿ
14. ಸಿ.ಸಿ. ಪಾಟೀಲ್ – ಗಣಿ & ಭೂ ವಿಜ್ಞಾನ ಇಲಾಖೆ
15. ಸಿ.ಟಿ. ರವಿ – ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
16. ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ, ಮೀನುಗಾರಿಕೆ, ಬಂದರು
17. ಶಶಿಕಲಾ ಜೊಲ್ಲೆ- ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ

ಮೂವರಿಗೆ ಡಿಸಿಎಂ ಪಟ್ಟ
1. ಗೋವಿಂದ ಕಾರಜೋಳ
2. ಅಶ್ವಥ್​ ನಾರಾಯಣ
3. ಲಕ್ಷ್ಮಣ್​ ಸವದಿ

Karnataka Cabinet Ministers Portfolios Official List

Follow Us:
Download App:
  • android
  • ios