ಜೆಮ್‌ಶೆಡ್‌ಪುರ[ಫೆ.18]: ತಮ್ಮ ಮೇಲೆ ದಾಳಿ ನಡೆಸಲು ಸಜ್ಜಾಗಿ, ಕೊನೆಗೆ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ಮಹಿಳಾ ನಕ್ಸಲ್‌ಗೆ ಸ್ವತಃ ಸಿಆರ್‌ಪಿಎಫ್‌ ಯೋಧರೇ ರಕ್ತದಾನ ಮಾಡಿದ ಮಾನವೀಯ ಘಟನೆ ಇಲ್ಲಿ ನಡೆದಿದೆ.

ಭಾವನೆಗಿಂತ ವೃತ್ತಿಯೇ ಮೇಲು!: ಪಾಕ್ ರಾಯಭಾರಿಗಳಿಗೆ CRPF ಯೋಧರಿಂದಲೇ ರಕ್ಷಣೆ!

ಜೆಮ್ಷೆಡ್‌ಪುರ ಸಮೀಪದ ಕಾಡಿನಲ್ಲಿ ನಕ್ಸಲ್‌ ನಾಯಕ ಕಂಡೇ ಹೊನಗಾ ನೇತೃತ್ವದ ತಂಡ ಭದ್ರತಾ ಪಡೆಗಳ ಮೇಲೆ ದಾಳಿಗೆ ಸಂಚು ರೂಪಿಸಿ ಹೊಂಚು ಹಾಕಿ ಕುಳಿತಿತ್ತು. ಈ ಮಾಹಿತಿ ಪಡೆದ ಸಿಆರ್‌ಪಿಎಫ್‌ ಅತ್ತ ಕಡೆ ತೆರಳಿದಾಗ, ಉಭಯ ಬಣಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಭದ್ರತಾ ಪಡೆಗಳ ದಾಳಿ ತಪ್ಪಿಸಿಕೊಳ್ಳಲಾಗದೆ 24 ಜನರ ನಕ್ಸಲ್‌ ತಂಡದಲ್ಲಿದ್ದ ಹಲವರು ಪರಾರಿಯಾದರು.

ಹುತಾತ್ಮ ಅಪ್ಪನ ಚಿತೆಗೆ ಬೆಂಕಿ ಸ್ಪರ್ಶಿಸಿ, ಪ್ರಜ್ಞೆತಪ್ಪಿ ಬಿದ್ದ 10 ವರ್ಷದ ಮಗಳು!

ಈ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳಾ ನಕ್ಸಲ್‌ ಪರಾರಿಯಾಗಲಾಗದೇ ಅಲ್ಲಿಯೇ ಬಿದ್ದು ಒದ್ದಾಡುತ್ತಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಸಿಆರ್‌ಫಿಎಫ್‌ ಯೋಧರು, ಆಕೆಗೆ ಅಗತ್ಯವಾದ ರಕ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.