ಬೆಂಗಳೂರು : ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ  ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಲಾವಿದ ಹಿರಣ್ಣಯ್ಯ  ಇಹಲೋಕ ತ್ಯಜಿಸುವ ಮುನ್ನ,  ತಮ್ಮ ಪಾರ್ಥಿವ ಶರೀರ ಹೆಚ್ಚು ಹೊತ್ತು ಇರಿಸಬೇಡಿ  ಎಂದು ಮಕ್ಕಳಿಗೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಬೇಗನೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ. 

ಮನೆ ಬಳಿ ಮಾತ್ರ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಆದರೆ  ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡುವ ಬಗ್ಗೆ ಇನ್ನೂ ಕೂಡ ಕುಟುಂಬ ವರ್ಗ ನಿರ್ಧರಿಸಿಲ್ಲ. ಆದರೆ ಸಂಜೆಯೊಳಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲು ಕುಟುಂಬ ನಿರ್ಧರಿಸಿದೆ.