ಚುನಾವಣೆಯಲ್ಲಿ ಜಾತ್ಯತೀತ ಮತ ವಿಭಜಿಸಲು ಸಿಪಿಎಂನ ಪ್ರಕಾಶ್ ಕಾರಟ್ ಬಿಜೆಪಿಯಿಂದ 100 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆಂದು ಕಾಂಗ್ರೆಸ್ ನೇತಾರ ಆರೋಪಿಸಿದ್ದಾರೆ. ಏನಿದು?

ಕೊಚ್ಚಿ: ದೇಶಾದ್ಯಂತ ಜಾತ್ಯತೀತ ಮತಗಳನ್ನು ವಿಭಜಿಸಲು ಸಿಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಬಣ ಬಿಜೆಪಿಯಿಂದ 100 ಕೋಟಿ ರು. ಹಣ ಪಡೆದಿದೆ ಎಂದು ಸಿಪಿಎಂನ ಮಾಜಿ ಸಂಸದ ಎ.ಪಿ. ಅಬ್ದುಲ್ಲಾಕುಟ್ಟಿಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ನಾಯಕಿಯದ್ದು ಇದೆಂಥಾ ಹೇಳಿಕೆ?

ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಚಲಾವಣೆಯಾಗುತ್ತಿದ್ದ ಮತಗಳನ್ನು ವಿಭಜನೆ ಮಾಡಿ, ಬಿಜೆಪಿಗೆ ಅನುಕೂಲವನ್ನು ಸಿಪಿಎಂ ನಾಯಕರು ಮಾಡಿಕೊಟ್ಟಿದ್ದಾರೆ. ದೆಹಲಿಯಲ್ಲಿರುವ ನನ್ನ ಹಳೆಯ ಕಾಮ್ರೇಡ್‌ ಮಿತ್ರರು ಈ ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ ಎಂದು ಕಣ್ಣೂರಿನ ಮಾಜಿ ಸಂಸದರಾಗಿರುವ ಕುಟ್ಟಿಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಗೆಲ್ಲಲು ರೆಡಿಯಾಯ್ತು ಬಿಜೆಪಿ ಮಾಸ್ಟರ್ ಪ್ಲ್ಯಾನ್

ಜೆಪಿಗೆ ಅನುಕೂಲವಾಯಿತು. ಪಿಲಿಬಾಂಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧರ್ಮೇಂದ್ರ ಕುಮಾರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು 278 ಮತಗಳ ಅಂತರದಿಂದ ಮಣಿಸಿದ್ದಾರೆ. ಸಿಪಿಎಂ ಅಲ್ಲಿ 2659 ಮತಗಳನ್ನು ಪಡೆದಿದೆ. ಸಿಪಿಎಂ ಅಭ್ಯರ್ಥಿಗೇ ಠೇವಣಿಯೇ ಸಿಕ್ಕಿಲ್ಲ. ಆದರೆ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ. ತನ್ಮೂಲಕ ಕೋಟಿಗಟ್ಟಲೆ ಹಣ ಗಳಿಸಿದೆ ಎಂದು 2009ರಿಂದ ಕಾಂಗ್ರೆಸ್ಸಿನಲ್ಲಿರುವ ಅವರು ದೂರಿದ್ದಾರೆ.

ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ: ಶುರವಾಯ್ತು ಹೊಸ ಅಭಿಯಾನ