ಭೋಪಾಲ್[ಡಿ.14]: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅನಿರೀಕ್ಷಿತ ಸೋಲು ಎದುರಾಗಿದೆ. ಬಿಜೆಪಿ ಭದ್ರ ಕೋಟೆಯಂತಿದ್ದ ಮಧ್ಯಪ್ರದೇಶದಲ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರ ನಡೆಸಲಿದೆ. ಶಿವರಾಜ್ ಸಿಂಗ್ ಚೌಹಾನ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಅರ್ಚನಾ ಚಿಟ್ನೀಸ್ ಬುರ್ಹಾನ್‌ಪುರ್‌ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಆದರೀಗ ಸೋಲಿನ ಬೆನ್ನಲ್ಲೇ ಸಚಿವೆ ನೀಡಿರುವ ಹೇಳಿಕೆ ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಬುರ್ಹಾನ್‌ಪುರ್‌ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಠಾಕೂರ್ ಸುರೇಂದ್ರ್ ಸಿಂಗ್‌ರಿಂದ 5120 ಮತಗಳ ಅಂತರದಿಂದ ಸೋಲನುಭವಿಸಿದ ಅರ್ಚನಾ ಸಾರ್ವಜನಿಕ ಸಭೆಯೊಂದರಲ್ಲಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ.

ಸೋಲಿನ ಬಳಿಕ ಅರ್ಚನಾ ಚಿಟ್ನೀಸ್‌ರವರ ಈ ವಿಡಿಯೋ ಭಾರೀ ವೈರಲ್ ಆಗಿದೆ. 'ಅಧಿಕಾರದಲ್ಲಿದ್ದಾಗ ನಾನೇನು ಮಾಡಿದ್ದೆನೋ, ಅಂತಹುದೇ ಪಾತ್ರ ಅಧಿಕಾರ ಇಲ್ಲದಿದ್ದರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಯಾರೆಲ್ಲಾ ನನಗೆ ತಮ್ಮ ಮತ ನೀಡಿದ್ದಾರೋ ಅವರನ್ನು ತಲೆಬಾಗಲು ಬಿಡುವುದಿಲ್ಲ. ಆದರೆ ಎಡವಟ್ಟಿನಿಂದ, ಭಯದಿಂದ ಅಥವಾ ಯಾವುದಾದರೂ ಆಮಿಷಕ್ಕೊಳಗಾಗಿ ನನಗೆ ಮತ ನೀಡದವರನ್ನು ಕಣ್ಣೀರು ಹರಿಸದಿದ್ದರೆ ನನ್ನ ಹೆಸರು ಅರ್ಚನಾ ಚಿಟ್ನೀಸ್‌ ಅಲ್ಲ. ನನಗೆ ಮತ ಹಾಕದವರು ಪಶ್ಚಾತಾಪ ಪಡುವಂತೆ ಮಾಡುತ್ತೇನೆ' ಎಂದಿದ್ದಾರೆ.

"

ಸದ್ಯ ಅಧಿಕಾರ ಪಡೆದಿರುವ ಕಾಂಗ್ರೆಸ್ ಕಮಲನಾಥ್‌ರನ್ನು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕಮಲನಾಥ್ ಪಕ್ಷದ ಹೈಕಮಾಂಡ್ ಹಾಗೂ ಮಂದ್ಯಪ್ರದೇಶದ ಜನರಿಗೆ ಧವನ್ಯವಾದ ತಿಳಿಸಿದ್ದಾರೆ. 'ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಪಕ್ಷಕ್ಕೆ ಸರ್ಕಾರ ನಡೆಸಲು ಮತ ಹಾಕಿದ ರಾಜ್ಯ ರಾಜ್ಯದ ಜನರಿಗೆ ಅಭಾರಿಯಾಗಿದ್ದೇನೆ' ಎಂದಿದ್ದಾರೆ.