ಗದಗ ಜಿಲ್ಲೆಯಲ್ಲಿ ಬಿಸಿಲಿನ ಝಳಕ್ಕೆ ಜಾನವಾರಗಳು ನರಳಾಡುತ್ತಿವೆ. ಇತ್ತ ಸಾಕಿದ ಮೂಕ ಪ್ರಾಣಿಗಳ ಗೋಳು ನೋಡಿ ರೈತರು ಒದ್ದಾಡುತ್ತಿದ್ದಾರೆ. ಇಲ್ಲಿ ರೈತರಿಗೆ ಪ್ರಾಣ ಸಂಕಟವಾದರೆ ಅಧಿಕಾರಿಗಳಿಗೆ ಚೆಲ್ಲಾಟವಾಗಿದೆ. ಭೀಕರ ಬರಕ್ಕೆ ಮೇವು, ನೀರಿಗಾಗಿ ಗೋಶಾಲೆಗೆ ಬಂದ್ರೆ ರೈತರ ಮೇಲೆ ಅಧಿಕಾರಿಗಳೇ ದರ್ಪ ತೋರಿಸುತ್ತಿದ್ದಾರೆ. ಇತ್ತ ಮೇವು ಇಲ್ಲದೆ ಪರದಾಡುತ್ತಿರುವ ಗೋವುಗಳನ್ನ ನೋಡಿ ರೈತ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾನೆ.

ಗದಗ(ಮಾ.27): ಗದಗ ಜಿಲ್ಲೆಯಲ್ಲಿ ಬಿಸಿಲಿನ ಝಳಕ್ಕೆ ಜಾನವಾರಗಳು ನರಳಾಡುತ್ತಿವೆ. ಇತ್ತ ಸಾಕಿದ ಮೂಕ ಪ್ರಾಣಿಗಳ ಗೋಳು ನೋಡಿ ರೈತರು ಒದ್ದಾಡುತ್ತಿದ್ದಾರೆ. ಇಲ್ಲಿ ರೈತರಿಗೆ ಪ್ರಾಣ ಸಂಕಟವಾದರೆ ಅಧಿಕಾರಿಗಳಿಗೆ ಚೆಲ್ಲಾಟವಾಗಿದೆ. ಭೀಕರ ಬರಕ್ಕೆ ಮೇವು, ನೀರಿಗಾಗಿ ಗೋಶಾಲೆಗೆ ಬಂದ್ರೆ ರೈತರ ಮೇಲೆ ಅಧಿಕಾರಿಗಳೇ ದರ್ಪ ತೋರಿಸುತ್ತಿದ್ದಾರೆ. ಇತ್ತ ಮೇವು ಇಲ್ಲದೆ ಪರದಾಡುತ್ತಿರುವ ಗೋವುಗಳನ್ನ ನೋಡಿ ರೈತ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾನೆ.

ಗೋವಿನ ನೋವು: ಹಸಿದ ಗೋವುಗಳಿಗೆ ಸಿಗುತ್ತಿಲ್ಲ ಮೇವು!

ಇದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗೋಶಾಲೆಯಲ್ಲಿ ಜಾನುವಾರುಗಳ ಗೋಳಾಟ ಹೇಳತೀರದು. ಕಳೆದ 3 ದಿನದಿಂದ ಗೋಶಾಲೆಯಲ್ಲಿ ಗೋವುಗಳು ಸಾಯುತ್ತಿದ್ದರೂ ಕ್ರಮಕ್ಕೆ ಮುಂದಾಗದೆ, ಮುಂಡರಗಿ ತಹಶೀಲ್ದಾರ್ ಬ್ರಮರಾಂಭ ಗೋವುಗಳನ್ನೇ ಹೊರಹಾಕಿದ್ದಾರಂತೆ, ಅಲ್ಲದೇ, ರೈತರನ್ನೂ ಗದರಿಸಿದ್ದಾರಂತೆ. 50ಕ್ಕೂ ಹೆಚ್ಚು ಜಾನುವಾರುಗಳನ್ನು ಗೋಶಾಲೆಯಿಂದ ಹೊರಹಾಕಲಾಗಿದೆ ಎನ್ನುವುದು ರೈತರ ಆರೋಪ.

ಜಾನುವಾರುಗಳಿಗೆ ಕಾಯಿಲೆ ನೆಪವೊಡ್ಡಿ ಜಾನುವಾರು ಹೊರಹಾಕಲಾಗಿದ್ದು, ತಹಶೀಲ್ದಾರ್ ವರ್ತನೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವುಗಳು ಸಾಯುತ್ತಿರೋದ್ರಿಂದ ನಾನೇ ಗೋಶಾಲೆಯಿಂದ ಹೊರಹಾಕಿದ್ದೇನೆ ಅಂತ ತಹಶೀಲ್ದಾರ್ ಅವರೇ ಒಪ್ಪಿಕೊಳ್ಳುತ್ತಾರೆ. ಇನ್ನು, ಗೋಶಾಲೆಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್ ಭೇಟಿ ನೀಡಿದ್ದು, ಇಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

3 ದಿನದಿಂದ ಗೋಶಾಲೆ ಸಮಸ್ಯೆ ಬಿಗಡಾಯಿಸಿದ್ದು, ರೈತರ ಆಸ್ತಿಯಾಗಿರುವ ಜಾನುವಾರುಗಳು ಮೇವಿಲ್ಲದೇ ಸಾಯುತ್ತಿವೆ. ಕ್ರಮಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ಮಾತ್ರ ಮೌನ ಮುರಿಯುತ್ತಿಲ್ಲ.