ಗೋಹತ್ಯೆ ನಿಯಂತ್ರಣ ಕುರಿತ ಕೇಂದ್ರದ ಹೊಸ ನಿಯಮದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿ ರುವಾಗಲೇ, ಗೋವುಗಳ ರಕ್ಷಣೆ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಲು, ಕ್ರಿಕೆಟ್‌ ಟೂರ್ನಿ ಗೆದ್ದವರಿಗೆ ಗೋವುಗಳನ್ನೇ ಉಡುಗೊರೆ ಯಾಗಿ ನೀಡಿದ ಅಚ್ಚರಿಯ ಪ್ರಕರಣ ವೊಂದು ಗುಜರಾತ್‌ನ ವಡೋದರಲ್ಲಿ ನಡೆದಿದೆ.

ಗುಜರಾತ್(ಜೂ.05): ಗೋಹತ್ಯೆ ನಿಯಂತ್ರಣ ಕುರಿತ ಕೇಂದ್ರದ ಹೊಸ ನಿಯಮದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿ ರುವಾಗಲೇ, ಗೋವುಗಳ ರಕ್ಷಣೆ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸಲು, ಕ್ರಿಕೆಟ್‌ ಟೂರ್ನಿ ಗೆದ್ದವರಿಗೆ ಗೋವುಗಳನ್ನೇ ಉಡುಗೊರೆ ಯಾಗಿ ನೀಡಿದ ಅಚ್ಚರಿಯ ಪ್ರಕರಣ ವೊಂದು ಗುಜರಾತ್‌ನ ವಡೋದರಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋವು ಮತ್ತು ಕುರಿಗಳನ್ನು ಸಾಕುವ ಇಲ್ಲಿನ ರಬಾರಿ ಸಮುದಾಯ ಇತ್ತೀಚೆಗೆ ಕ್ರಿಕೆಟ್‌ ಟೂರ್ನಿ ಆಯೋಜಿಸಿತ್ತು. ಗೋವುಗಳನ್ನು ದೇವರೆಂದೇ ಪೂಜಿಸುವ ಈ ಸಮುದಾಯದ ನಾಯಕರು, ಕ್ರಿಕೆಟ್‌ ಟೂರ್ನಿ ಗೆದ್ದ ತಂಡದ ಎಲ್ಲಾ ಸದಸ್ಯರಿಗೂ ತಲಾ ಒಂದು ಗೋವಿನ ಕರುಗಳನ್ನು ನೀಡಿದ್ದಾರೆ. ಜೊತೆಗೆ ಪ್ರತಿ ಪಂದ್ಯದ ಪಂದ್ಯ ಪುರುಷೋತ್ತಮರಾಗಿ ಆಯ್ಕೆಯಾದವರಿಗೆ ಹಸುವನ್ನು ಬಹುಮಾನವಾಗಿ ನೀಡಿದ್ದಾರೆ.