ಎರಡು ಲಕ್ಷ ರೂ. ಠೇವಣಿ ಇಡುವಂತೆ ಆದೇಶಿಸಿರುವ ನ್ಯಾಯಾಲಯ, ತ್ಯಾಗಿ ಅವರಿಗೆ ನಗರ ಬಿಟ್ಟು ಹೊರಹೋಗದಂತೆ ಸೂಚಚಿಸಿದೆ.

ನವದೆಹಲಿ (ಡಿ. 26): ಅಗಸ್ಟಾ ವೆಸ್ಟ್’ಲ್ಯಾಂಡ್ ಹಗರಣ ಪ್ರಕರಣದಲ್ಲಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿಗೆ ಇಲ್ಲಿಯ ಸ್ಥಳೀಯ ನ್ಯಾಯಾಲಯ ಇಂದು ಜಾಮೀನು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ಲಕ್ಷ ರೂ. ಠೇವಣಿ ಇಡುವಂತೆ ಆದೇಶಿಸಿರುವ ನ್ಯಾಯಾಲಯ, ತ್ಯಾಗಿ ಅವರಿಗೆ ನಗರ ಬಿಟ್ಟು ಹೊರಹೋಗದಂತೆ ಸೂಚಚಿಸಿದೆ.

ಇತರ ಇಬ್ಬರು ಆರೋಪಿಗಳು- ಸಂಜೀವ್ ತ್ಯಾಗಿ ಹಾಗೂ ಗೌತಮ್ ಖೇತಾನ್- ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಜ.4 ವಿಚಾರಣೆ ನಡೆಸಲಿದೆ.

ವಾಯುಪಡೆಯ ಮುಖ್ಯಸ್ಥರಾಗಿದ್ದಾಗ ಅಗಸ್ಟಾ ವೆಸ್ಟ್’ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ತ್ಯಾಗಿ ಅವರ ಮೇಲಿದೆ.