45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ; ಕೇಂದ್ರದ ಮಹತ್ವದ ನಿರ್ಧಾರ!...

ದೇಶದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿದೆ.  ಎರಡನೇ ಅಲೆ ಆತಂಕ ಎದುರಾಗಿದೆ. ಇದರ ನಡುವೆ ಕೊರೋನಾ ಲಸಿಕೆ ಅಭಿಯಾನ ಕೂಡ ಚುರುಕಾಗಿದೆ. ಇದೀಗ ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಮುಂದಾಗಿದೆ. 

ಜಾರಕಿಹೊಳಿ ರಾಸಲೀಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸರ್ಕಾರಕ್ಕೆ ಇಕ್ಕಟ್ಟು!...

ಮಾಜಿ ಸಚಿವ ರಮೇಶ್ ಜಾರಕಿಹೊಲಿ ರಾಸಲೀಲೆ ಸಿ.ಡಿ. ಪ್ರಕರಣ ಕಾಂಗ್ರೆಸ್ ನಾಯಕರು ಇಂದು (ಮಂಗಳವಾರ) ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ಮಾಡಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಈ ಬಿಗಿಪಟ್ಟಿಗೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ದಿಲ್ಲಿಗೆ ಉಪ ರಾಜ್ಯಪಾಲರೇ ಸುಪ್ರೀಂ: ಕೆಂದ್ರದ ಮಸೂದೆಗೆ ಸಿಎಂ ಕೇಜ್ರಿವಾಲ್‌ ಕಿಡಿ!...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಪ ರಾಜ್ಯಪಾಲರೇ ಆಡಳಿತದ ಮುಖ್ಯಸ್ಥರು ಎಂದು ಸಾರುವ ಮಸೂದೆಯೊಂದನ್ನು ವಿಪಕ್ಷಗಳ ವಿರೋಧದ ಮಧ್ಯೆಯೇ ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲಾಗಿದೆ. ಇದು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಮತ್ತೊಂದು ಸುತ್ತಿನ ಜಟಾಪಟಿಗೆ ಎಡೆ ಮಾಡಿಕೊಟ್ಟಿದೆ.

‘ಅಂಪೈ​ರ್ಸ್ ಕಾಲ್‌’ಬಗ್ಗೆ ಐಸಿಸಿಗೆ ಎಚ್ಚರಿಕೆ ಕೊಟ್ಟ ವಿರಾಟ್‌ ಕೊಹ್ಲಿ...

ಎಲ್‌ಬಿಡಬ್ಲ್ಯೂ ವಿಚಾರದಲ್ಲಿ ಅಂಪೈರ್‌ ಕಾಲ್‌ ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿದ್ದು, ಮಹತ್ವದ ಪಂದ್ಯಗಳಲ್ಲಿ ಈ ನಿಯಮ ವಿವಾದಕ್ಕೆ ಕಾರಣವಾಗಬಹುದು ಎಂದು ವಿರಾಟ್ ಕೊಹ್ಲಿ ಐಸಿಸಿಯನ್ನು ಎಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ರಿಯಲ್ ಸಾರಥಿ ಜೊತೆ ದರ್ಶನ್; ಶಾಲಾ ಬಸ್ ಡ್ರೈವರ್‌ಗೆ 80ನೇ ಹುಟ್ಟುಹಬ್ಬ!...

ರಾಬರ್ಟ್ ವಿಜಯ್ ಯಾತ್ರೆಯಿಂದ ಹಿಂದಿರುಗುವಾಗ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ ನಟ ದರ್ಶನ್. ಯಾರದು ನೋಡಿ.....

ಆರ್‌ಐಎಲ್ ಎಜಿಎಂ ವೇಳೆ ಜಿಯೋ ಲ್ಯಾಪ್‌ಟ್ಯಾಪ್, 5ಜಿ ಫೋನ್ ಬಿಡುಗಡೆ?...

ಭಾರತದ ಬಹುದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ರಿಲಯನ್ಸ್‌ನ ಜಿಯೋ 5ಜಿ ಸ್ಮಾರ್ಟ್‌ಫೋನ್ ಹಾಗೂ ಕೈಗೆಟಕುವ ಜಿಯೋಬುಕ್ ಎಂಬ ಲ್ಯಾಪ್‌ಗಳನ್ನು ರಿಲಯನ್ಸ್ ಇಂಡಸ್ಟ್ರಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯ ವೇಳೆ ಬಿಡುಗಡೆ ಮಾಡಲಿದೆ ಎನ್ನುತ್ತಿವೆ ವರದಿಗಳು. ಈ ಎರಡು ಸಾಧನಗಳ  ಬಗ್ಗೆ ಬಹಳ ದಿನಗಳಿಂದಲೂ ಮಾತುಗಳು ಕೇಳಿ ಬರುತ್ತಿವೆ ಮತ್ತು ಅವು ಈಗ ಬಿಡುಗಡೆ ಹಂತಕ್ಕೆ ಬಂದು ನಿಂತಿವೆ ಎನ್ನಬಹುದು.

ಕೇಂದ್ರದ ಸಾಲ ಮರುಪಾವತಿ ಮುಂದೂಡಿಕೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!...

ಕಳೆದ ಮಾರ್ಚ್ ತಿಂಗಳಲ್ಲಿ ಕೊರೋನಾ ಕಾರಣ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಜೂನ್ ತಿಂಗಳ ವರೆಗೂ ಲಾಕ್‌ಡೌನ್ ವಿಸ್ತರಣೆಯಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ಸಾಲ ಮರುಪಾವತಿಯನ್ನು ಆರಂಭದಲ್ಲಿ 3 ಹಾಗೂ ಬಳಿಕ 3 ತಿಂಗಳು ಮುಂದೂಡಿಕೆ ಮಾಡಿತ್ತು. ಸಾಲದ ಬಡ್ಡಿ ಮನ್ನ ಮಾಡುವ ಕುರಿತು ಪರ ವಿರೋಧಗಳು ಕೇಳಿಬಂದಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

200 ರೂಪಾಯಿ ಟ್ರಾಫಿಕ್ ಫೈನ್ ಕೇಸ್ ಗೆಲ್ಲಲು 10,000 ರೂಪಾಯಿ ಖರ್ಚು ಮಾಡಿದ ಉದ್ಯಮಿ!...

ಟ್ರಾಫಿಕ್ ದಂಡ ಕುರಿತು ಪ್ರಕರಣ ಇದೀಗ ದೇಶದ ಗಮನ ಸೆಳೆದಿದೆ. 200 ರೂಪಾಯಿ ಟ್ರಾಫಿಕ್ ಫೈನ್ ಪ್ರಕರಣದಲ್ಲಿ ತನ್ನ ತಪ್ಪಿಲ್ಲ ಎಂದು ಸಾಬೀತು ಪಡಿಸಲು 10,000 ರೂಪಾಯಿ ಖರ್ಚು ಮಾಡಿದ ಘಟನೆ ನಡೆದಿದೆ. ಈ ಕುರಿತ ವಿವರ ಇಲ್ಲಿವೆ.

ಅಡಲ್ಟ್ ಚಿತ್ರಗಳಲ್ಲಿ ನಟಿಸಲು ಉದ್ಯೋಗ ತೊರೆದ ಪೊಲೀಸ್ ಅಧಿಕಾರಿ...

ಇಂಗ್ಲೆಂಡಿನ ಈ ಪೊಲೀಸ್ ಅಧಿಕಾರಿ, ಪುರುಷರ ಅಧಿಪತ್ಯವಿರುವ ಪೊಲೀಸ್ ಡಿಪಾರ್ಟ್‌ಮೆಂಟ್ ತೊರೆದು, ವಯಸ್ಕರ ಚಿತ್ರಗಳ ಕಂಟೆಂಟ್ ಕೊಡಲು ಶುರು ಮಾಡಿದ್ದಾಳೆ. 

ಹೋಂ ಮಿನಿಸ್ಟರ್, ಕಮಿಷನರ್ ಮಧ್ಯೆ ನೂರು ಕೋಟಿ ಡೀಲ್!...

ಆ ಮಂತ್ರಿಗೆ ತಿಂಗಳಿಗೆ ಬೇಕಂತೆ ನೂರು ಕೋಟಿ ಹಫ್ತಾ. ಪೊಲೀಸರಿಂದಲೇ ನಡೆಯುತ್ತಿದ್ದ ಕಲೆಕ್ಷನ್ ಹೇಗಿತ್ತು ಗೊತ್ತಾ? ಇದು ಸರ್ಕಾರವೇ ನಡೆಸಿದ ಭಯಂಕರ ದಂಧೆನಾ? ನೂರು ಕೋಟಿ ಮಾಮೂಲು ಕತೆಯಲ್ಲಿ ಹೋಂ ಮಿನಿಸ್ಟರ್ ಶಾಮೀಲಾಗಿದ್ದಾರಾ? ಅಲ್ಲಿದ್ದವರೆಲ್ಲಾ ಕಳ್ಳರೆನಾ? ಹೋಂ ಮಿನಿಸ್ಟರ್ ಹಾಗೂ ಮುಂಬೈ ಕಮಿಷನರ್ ಮಧ್ಯೆ ನಡೆದಿದ್ದ ನೂರು ಕೋಟಿ ಡೀಲ್ ರಹಸ್ಯ ಏನು ಗೊತ್ತಾ?