ಬೆಂಗಳೂರು (ಸೆ. 28): ರಾಜ್ಯದಾದ್ಯಂತ ವಿದ್ಯುತ್‌ ಅವಘಡಗಳಿಗೆ ಮಕ್ಕಳು ತುತ್ತಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೂರು ತಿಂಗಳ ಒಳಗಾಗಿ ಶಿಫಾರಸ್ಸುಗಳ ಅನ್ವಯ ಕೈಗೊಂಡ ಸುರಕ್ಷತಾ ಕ್ರಮಗಳ ಕುರಿತಂತೆ ಸಂಪೂರ್ಣ ವರದಿ ಸಲ್ಲಿಸಲು ಇಂಧನ ಇಲಾಖೆಗೆ ಸೂಚಿಸಿದೆ.

ಪಿಂಚಣಿಗಾಗಿ ಅ. 17 ಕ್ಕೆ ಬಿಸಿಯೂಟ ನೌಕರರಿಂದ ರಾಜ್ಯಾದ್ಯಂತ ಪ್ರತಿಭಟನೆ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್‌ ಅವಘಡಗಳಿಂದಾಗಿ ಮಕ್ಕಳ ಪ್ರಾಣ ಹಾನಿಯಾಗುತ್ತಿದೆ. ಈ ಕುರಿತಂತೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ದೇವರಾಜ ಅರಸು ವಿದ್ಯಾರ್ಥಿ ನಿಲಯದ ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಅವಘಡಗಳ ಸಂಬಂಧ ಮಕ್ಕಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ 7 ಪ್ರಕರಣ ನಡೆದಿದ್ದು, ಈ ಪೈಕಿ ಕೊಪ್ಪಳ (5 ಮಕ್ಕಳು), ಚಿತ್ರದುರ್ಗ(2), ಕುಷ್ಟಗಿ (2) ಹಾಗೂ ಬೆಂಗಳೂರು ನಗರ (3) ಸೇರಿದಂತೆ 12 ಮಕ್ಕಳು ಸಾವನ್ನಪ್ಪಿದ್ದಾರೆ. ಹಾಗಾಗಿ ಈ ಸಂಬಂಧ ಇಂಧನ ಇಲಾಖೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ಆಯೋಗ ಶಿಫಾರಸು ಮಾಡಿದ್ದು, ಇದರ ಅನುಷ್ಠಾನಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ಆಯೋಗ ಕೋರಿದೆ.

ಸಾಳ್ವೆಗೆ 1 ರೂ ಸಂಭಾವನೆ ಹಸ್ತಾಂತರ; ಸುಷ್ಮಾ ಕೊನೆ ಆಸೆ ಪೂರೈಸಿದ ಪುತ್ರಿ!

ವಿದ್ಯುತ್‌ ಅವಘಡದಲ್ಲಿ ಗಾಯಗೊಂಡ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸುವುದು, ವಾರದೊಳಗೆ ಪರಿಹಾರ ನೀಡುವುದು, ಪ್ರಾಣ ಹಾನಿ ಪ್ರಕರಣಗಳನ್ನು ತುರ್ತಾಗಿ ತನಿಖೆ ನಡೆಸಿ ವರದಿ ನೀಡುವುದು, ಪರಿಹಾರವನ್ನು ಸಂತ್ರಸ್ತ ಕುಟುಂಬಗಳಿಗೆ ತಲುಪಿಸುವ ಶಿಫಾರಸುಗಳನ್ನು ಇಂಧನ ಇಲಾಖೆಗೆ ಆಯೋಗದಿಂದ ಸಲ್ಲಿಸಲಾಗಿದೆ.

ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹಾಗೂ ಕಟ್ಟಡ ಕಾಮಗಾರಿಗಳ ಸ್ಥಳದಲ್ಲಿ ಅಕ್ರಮ ಮತ್ತು ಅಸುರಕ್ಷಿತವಾದ ವಿದ್ಯುತ್‌ ಸಂಪರ್ಕದಿಂದ ಆಗುವ ಅನಾಹುತಗಳಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆ ವತಿಯಿಂದ ಮಾರ್ಗಸೂಚಿ ಹೊರಡಿಸಬೇಕು. ಅದರ ಕಡ್ಡಾಯವಾದ ಅನುಸರಣೆಗೆ ಕಟ್ಟುನಿಟ್ಟಾದ ನಿಯಮ ಜಾರಿಗೊಳಿಸಬೇಕು. ದುರಸ್ತಿಯಲ್ಲಿರುವ ವಿದ್ಯುತ್‌ ಕಂಬಗಳನ್ನು ಗುರುತಿಸಿ ಇಲಾಖೆಗೆ ವರದಿ ಸಲ್ಲಿಸಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಬೇಕು. ಹಾಗೆ ದುರಸ್ತಿಯಲ್ಲಿರುವ ಕಂಬಗಳನ್ನು ತುರ್ತಾಗಿ ತೆರವುಗೊಳಿಸಬೇಕು ಎಂದು ಶಿಫಾರಸ್ಸಿನಲ್ಲಿ ಸೂಚಿಸಲಾಗಿದೆ.

- ಸಾಂದರ್ಭಿಕ ಚಿತ್ರ