ನವದೆಹಲಿ[ಸೆ.28]: ಪಾಕಿಸ್ತಾನದ ಬಂಧನದಲ್ಲಿರುವ ಭಾರತದ ಕುಲಭೂಷಣ್‌ ಜಾಧವ್‌ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್‌ ಸಾಳ್ವೆ ಅವರು ಕೇಳಿದ್ದ 1 ರು. ಗೌರವ ಸಂಭಾವನೆಯನ್ನು ಸುಷ್ಮಾ ಸ್ವರಾಜ್‌ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಅವರು ಪೂರೈಸಿದ್ದಾರೆ.

ಟ್ವಿಟರ್‌ನಲ್ಲಿ ದಿ.ಸುಷ್ಮಾ ಸ್ವರಾಜ್, ನಿಮಗೊಂದು ಮಾಹಿತಿ

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್‌ ಪರ ವಾದಿಸಿ ನ್ಯಾಯ ಒದಗಿಸಿದ್ದ ಸಾಳ್ವೆ ಅವರು ಇದಕ್ಕೆ ಗೌರವಾರ್ಥವಾಗಿ ಕೇವಲ 1 ರು. ಸಂಭಾವನೆ ಪಡೆಯುವುದಾಗಿ ಹೇಳಿದ್ದರು. ಇದಕ್ಕೆ ಅಂದು ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌ ಅಭಿನಂದನೆಯನ್ನೂ ಸಲ್ಲಿಸಿದ್ದರು. ಆದರೆ ಈ 1 ರುಪಾಯಿಯನ್ನು ಅವರಿಗೆ ಕೊಡಲು ಕಾಲ ಕೂಡಿ ಬಂದಿರಲಿಲ್ಲ. ಆದರೆ ಅಂತಿಮವಾಗಿ 2019ರ ಆ.6ರಂದು ಸಂಜೆ ಸಾಳ್ವೆ ಅವರಿಗೆ ಕರೆ ಮಾಡಿದ್ದ ಸುಷ್ಮಾ, ನಾಳೆ ಬಂದು 1 ರುಪಾಯಿ ಪಡೆದುಕೊಂಡು ಹೋಗಿ ಎಂದಿದ್ದರು. ಈ ಕರೆ ಮಾಡಿದ 2 ಗಂಟೆಯಲ್ಲೇ ಸುಷ್ಮಾ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾಳ್ವೆ ಅವರ ಮನೆಗೆ ತೆರಳಿದ ಸುಷ್ಮಾರ ಪುತ್ರಿ ಬಾನ್ಸುರಿ, 1 ರುಪಾಯಿ ನಾಣ್ಯ ಹಸ್ತಾಂತರಿಸುವ ಮೂಲಕ ತಮ್ಮ ತಾಯಿಯ ವಾಗ್ದಾನ ಪೂರೈಸಿದರು.

ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ!