Asianet Suvarna News Asianet Suvarna News

ಪಿಂಚಣಿಗಾಗಿ ಅ.17 ಕ್ಕೆ ಬಿಸಿಯೂಟ ನೌಕರರಿಂದ ರಾಜ್ಯಾದ್ಯಂತ ಪ್ರತಿಭಟನೆ

ಪಿಂಚಣಿಗಾಗಿ ಅ.17ಕ್ಕೆ ಬಿಸಿಯೂಟ ನೌಕರರಿಂದ ರಾಜ್ಯಾದ್ಯಂತ ಪ್ರತಿಭಟನೆ | ರಾಜ್ಯ ಬಿಸಿಯೂಟ ನೌಕರರಿಗೆ ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ | 

Government order on pension for midday meal workers opposed stage a protest on October 17
Author
Bengaluru, First Published Sep 28, 2019, 9:47 AM IST

ಬೆಂಗಳೂರು (ಸೆ. 28): ರಾಜ್ಯ ಬಿಸಿಯೂಟ ನೌಕರರಿಗೆ ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಅ.17ರಂದು ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ತಿಳಿಸಿದ್ದಾರೆ.

ಈ ಹಿಂದೆ ರಾಜ್ಯ ಸರ್ಕಾರ ಬಿಸಿಯೂಟ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಲು ಒಪ್ಪಿಗೆ ಸೂಚಿಸಿತ್ತು. ನೌಕರರಿಂದ ಮಾಸಿಕ ನಿಗದಿತ ಮೊತ್ತ ಕಡಿತ ಮಾಡಿ ಸರ್ಕಾರದಿಂದ ಅಷ್ಟೇ ಮೊತ್ತ ಸೇರಿಸಿ ನಿವೃತ್ತಿ ಬಳಿಕ ಆ ಮೊತ್ತ ನೀಡುವುದಾಗಿ ಹೇಳಿತ್ತು. ಇದೀಗ ಶಿಕ್ಷಣ ಇಲಾಖೆ ಆಯುಕ್ತರು ಯಾವುದೇ ಚರ್ಚೆ ಇಲ್ಲದೆ ಬಿಸಿಯೂಟ ನೌಕರರನ್ನು ಕೇಂದ್ರದ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್‌ ಪಿಂಚಣಿ ಯೋಜನೆ’ಗೆ ಸೇರಿಸುವುದಾಗಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರದ ಈ ಯೋಜನೆಯು 18ರಿಂದ 40 ವರ್ಷದೊಳಗಿನ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ರಾಜ್ಯದಲ್ಲಿ 1.18 ಲಕ್ಷ ಬಿಸಿಯೂಟ ನೌಕರರಿದ್ದು, ಈ ಪೈಕಿ 40 ವರ್ಷ ಮೀರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಯೋಜನೆಯಿಂದ ಹೆಚ್ಚಿನವರು ವಂಚಿತರಾಗುತ್ತಾರೆ. ಹಾಗಾಗಿ ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಮಟ್ಟದ ಹೋರಾಟಕ್ಕೆ ಕರೆ ನೀಡಲಾಗಿದೆ. ಇದಕ್ಕೂ ಬಗ್ಗದಿದ್ದರೆ ಡಿಸೆಂಬರ್‌ ಮೊದಲ ವಾರದಿಂದ ಅಡುಗೆ ಕೆಲಸ ನಿಲ್ಲಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Follow Us:
Download App:
  • android
  • ios