ಇಲ್ಲಿನ ಗಣೇಶಪೇಟೆಯಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದ್ದು, ಪಾಕಿಸ್ತಾನವನ್ನು ಅಲ್ಲಿಗೇ ಹೋಗಿ ನೋಡಬೇಕೆಂದಿಲ್ಲ ಎಂದು ಮೌಲ್ವಿಯೊಬ್ಬರು ಶನಿವಾರ ಈದ್‌ಮಿಲಾದ್ ಆಚರಣೆ ವೇಳೆ ವಿವಾದಾತ್ಮಕ ಭಾಷಣ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಹುಬ್ಬಳ್ಳಿ: ಇಲ್ಲಿನ ಗಣೇಶಪೇಟೆಯಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದ್ದು, ಪಾಕಿಸ್ತಾನವನ್ನು ಅಲ್ಲಿಗೇ ಹೋಗಿ ನೋಡಬೇಕೆಂದಿಲ್ಲ ಎಂದು ಮೌಲ್ವಿಯೊಬ್ಬರು ಶನಿವಾರ ಈದ್ಮಿಲಾದ್ ಆಚರಣೆ ವೇಳೆ ವಿವಾದಾತ್ಮಕ ಭಾಷಣ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ನಗರದ ಗಣೇಶಪೇಟೆಯಲ್ಲಿ ಮಸೀದಿಯಲ್ಲಿ ನಡೆದ ಈದ್ ಮಿಲಾದ್ ಆಚರಣೆ ವೇಳೆ ಭಾಷಣ ಮಾಡಿರುವ ಮೌಲ್ವಿ, ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ. ಪಾಕಿಸ್ತಾನ ನೋಡಲು ಅಲ್ಲಿಗೇ ಹೋಗಬೇಕಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಎಸಿಪಿ ಎಚ್.ಜಿ. ದಾವೂದ್ ಖಾನ್ ಮತ್ತಿತರ ಪೊಲೀಸರೂ ಕಾರ್ಯಕ್ರಮದಲ್ಲಿ ಹಾಜರಿದ್ದರೂ ವಿವಾದಾತ್ಮಕ ಭಾಷಣಕ್ಕೆ ತಡೆಯೊಡ್ಡಿಲ್ಲ. ಈ ವಿಚಾರವಾಗಿ ಎಸಿಪಿ ದಾವುದ್ಖಾನ್ ಅವರನ್ನು ಸಂಪರ್ಕಿಸಿದಾಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರನ್ನು ಸಂಪರ್ಕಿಸಿದಾಗ, ‘ಮೌಲ್ವಿಯವರು ಯಾವುದೇ ವಿವಾದಾತ್ಮಕ ಭಾಷಣ ಮಾಡಿಲ್ಲ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ.
ಎಲ್ಲರೂ ಒಗ್ಗಟ್ಟಾಗಿ ಬಾಳಬೇಕೆಂದು ಮೌಲ್ವಿಯವರು ಹೇಳಿದ್ದಾರೆ ಎಂದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮೌಲ್ವಿಯವರ ಭಾಷಣದ ವಿಡಿಯೋದಲ್ಲಿ ‘ಗಣೇಶಪೇಟೆ ಪಾಕಿಸ್ತಾನದಂತೆ ಕಾಣುತ್ತಿದೆ’ ಎಂದಿರುವುದು ಸ್ಪಷ್ಟವಾಗಿದೆ.
