Asianet Suvarna News Asianet Suvarna News

ಗಾಯಕ್ ವಾಡ್ ಜೊತೆ ಸೆಲ್ಫಿಗೆ ಭಾರೀ ಡಿಮ್ಯಾಂಡ್! ಇದರಿಂದ ತಪ್ಪಿಸಿಕೊಳ್ಳಲು ಇವರು ಮಾಡಿದ್ದೇನು?

ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಶೂ ಇಂದ ಹೊಡೆದ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಭಾರೀ ಡಿಮ್ಯಾಂಡ್ ಶುರುವಾಗಿದೆಯಂತೆ!

Controversial Shiv Sena MP Ravindra Gaikwad hires doppelganger to deal with surging selfie demands
  • Facebook
  • Twitter
  • Whatsapp

ನವದೆಹಲಿ (ಏ.15): ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಶೂ ಇಂದ ಹೊಡೆದ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಭಾರೀ ಡಿಮ್ಯಾಂಡ್ ಶುರುವಾಗಿದೆಯಂತೆ!

ಏರ್ ಇಂಡಿಯಾ ಘಟನೆ ನಡೆದಾಗಿನಿಂದ ಮಾಧ್ಯಮಗಳು ನನ್ನನ್ನು ಹೆಚ್ಚು ಫೋಕಸ್ ಮಾಡಲು ಶುರು ಮಾಡಿದವು. ಜನರು ನನ್ನ ಗುರುತಿಸಲು ಶುರು ಮಾಡಿದರು. ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ವಿನಂತಿಸಿಕೊಳ್ಳುತ್ತಾರೆ. ಅವರಿಗೆ ಬೇಸರ ಮಾಡಲು ನನಗಿಷ್ಟವಿಲ್ಲ. ಇದಕ್ಕಾಗಿಯೇ ಜಾಸ್ತಿ ಸಮಯ ವ್ಯಯವಾಗುವುದರಿಂದ ನನ್ನ ಜೊತೆ ಬಹಳ ಕಾಲದಿಂದ ಕೆಲಸ ಮಾಡುತ್ತಿರುವ ಪಕ್ಷದ ಕಾರ್ಯಕರ್ತ ರತ್ನಕಾಂತ್ ಸಾಗರ್ ರನ್ನು ನನ್ನಂತೆ ಪೋಸ್ ಕೊಡಲು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಗಾಯಕ್ ವಾಡ್ ಹೇಳಿದ್ದಾರೆ.

ರವೀಂದ್ರ ಗಾಯಕ್ ವಾಡ್ ಹಾಗೂ ಸಾಗರ್ ಗಡ್ಡದಲ್ಲಿ ಹೋಲಿಕೆಯಿದ್ದು ಇಬ್ಬರೂ ಒಂದೇ ರೀತಿ ಕಾಣುತ್ತಾರೆ. ಜನರು ಸೆಲ್ಫಿಗೆ ಮುಗಿಬಿದ್ದಾಗ ಗಾಯಕ್ ವಾಡ್ ರಂತೆಯೇ ಸಾಗರ್ ಪೋಸ್ ನೀಡುತ್ತಾರೆ. ಹೊರಗಡೆ ಓಡಾಡುವಾಗ ನಾನು ಹಾಕುವ ಕುರ್ತಾ ಪೈಜಾಮನ್ನು ಹಾಕಿಕೊಂಡು ಹೋಗುವಂತೆ ಗಾಯಕ್ ವಾಡ್ ಸಾಗರ್ ಗೆ ಸೂಚಿಸಿದ್ದಾರಂತೆ.  

Follow Us:
Download App:
  • android
  • ios