ಇನ್ನೇನು ಕೆಲವೇ ದಿನಗಳಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು ಐದರಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ನವದೆಹಲಿ : ಇದೇ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಕೂಟವು 3 ರಾಜ್ಯಗಳಲ್ಲಿ ಜಯಸಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಇದು ಇತರ ಸಮೀಕ್ಷೆಗಳಿಗಿಂತ ಕೊಂಚ ಭಿನ್ನ ಭವಿಷ್ಯ ನುಡಿದಿದೆ.
ರಾಜಸ್ಥಾನ: 200 ಸದಸ್ಯಬಲದ ರಾಜಸ್ಥಾನದಲ್ಲಿ ಬಿಜೆಪಿ 45, ಕಾಂಗ್ರೆಸ್ 145 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಮಧ್ಯಪ್ರದೇಶ: ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ ಕಾಂಗ್ರೆಸ್ 116 ಹಾಗೂ ಬಿಜೆಪಿ 107 ಸೀಟು ಗಳಿಸಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ತೆಲಂಗಾಣ: ತೆಲಂಗಾಣದ 119 ಕ್ಷೇತ್ರಗಳಲ್ಲಿ ಕಾಂಗ್ರೆಸ್+ತೆಲುಗುದೇಶಂ ಮೈತ್ರಿಕೂಟ 64 ಸ್ಥಾನ ಗಳಿಸಿ ಸರಳ ಬಹುಮತ ಸಾಧಿಸಲಿದೆ ಎಂದಿದೆ ಸಿ-ವೋಟರ್.
ಛತ್ತೀಸ್‌ಗಢ: ಛತ್ತೀಸ್‌ಗಢದ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್ 41 ಹಾಗೂ ಬಿಜೆಪಿ 43 ಸ್ಥಾನ ಗಳಿಸಲಿದ್ದು, ಅತಂತ್ರ ಸ್ಥಿತಿ ಸೃಷ್ಟಿಯಾಗಲಿದೆ. 6 ಸ್ಥಾನ ಗಳಿಸಲಿರುವ ಇತರರು ನಿರ್ಣಾಯಕರಾಗಲಿದ್ದಾರೆ.
ಮಿಜೋರಂ: 40 ಸ್ಥಾನ ಇರುವ ಮಿಜೋರಂನಲ್ಲೂ ಅತಂತ್ರ ವಿಧಾನಸಭೆ ಭವಿಷ್ಯ ನುಡಿಯಲಾಗಿದೆ. ಮಿಜೋ ನ್ಯಾಷನಲ್ ಫ್ರಂಟ್ 17, ಕಾಂಗ್ರೆಸ್ 12, ಝೋರಂ ಪೀಪಲ್ಸ್ ಪಕ್ಷ 9 ಸ್ಥಾನ ಪಡೆಯುವ ಭವಿಷ್ಯ ಹೇಳಲಾಗಿದೆ.
