ರಾಜಿನಾಮೆಯಿಂದ ಕಾಂಗ್ರೆಸ್’​ಗೆ ಭಾರೀ ನಷ್ಟವಾಗುತ್ತದೆ. ಅಗತ್ಯ ಬಿದ್ದರೆ ಕೃಷ್ಣರ ಮಾರ್ಗದರ್ಶನ ಪಡೆಯುತ್ತೇನೆ. ಕೃಷ್ಣರ ರಾಜಿನಾಮೆಯಿಂದ ರಾಜಕೀಯದಲ್ಲಿ ಬದಲಾವಣೆ ಕೂಡ ಆಗಲಿದೆ

ತುಮಕೂರು (ಜ.29): ಸಕ್ರಿಯ ರಾಜಕಾರಣಕ್ಕೆ ಧಿಡೀರ್ ರಾಜೀನಾಮೆ ನೀಡಿದ ಎಸ್.ಎಂ.ಕೃಷ್ಣರ ನಿರ್ಧಾರಕ್ಕೆ, ರಾಜಕೀಯ ಮುತ್ಸದ್ಧಿಗಳು ಪ್ರತಿಕ್ರಿಯಿಸಿದ್ದು, ಎಸ್.ಎಂ. ಕೃಷ್ಣ ಅನುಭವಿ ರಾಜಕಾರಣಿ. ಹೈಕಮಾಂಡ್ ಅವರ ಮನವೊಲಿಕೆ ಕೆಲಸ ಮಾಡುತ್ತದೆ. ಕೃಷ್ಣ ಹಲವಾರು ಹುದ್ದೆಗಳಲ್ಲಿ ಕೆಲಸ‌ ಮಾಡಿದ್ದಾರೆ. ಅವರ‌ ಬಗ್ಗೆ‌ ಲಘುವಾಗಿ‌ ಮಾತನಾಡುವುದಿಲ್ಲ ಎಂದು ತುಮಕೂರಿನಲ್ಲಿ ಮಾಜಿ ಪ್ರಧಾನಿ‌ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುತ್ತೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ..ಕೃಷ್ಣ ಅವರ ಅನುಭವವನ್ನು ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇಳಿವಯಸ್ಸಿನಲ್ಲಿ ಕೃಷ್ಣರನ್ನು ಈ ರೀತಿ ನಡೆಸಿಕೊಂಡಿದ್ದು ಸರಿಯಲ್ಲ. ಕೃಷ್ಣರ ರಾಜಿನಾಮೆಯಿಂದ ಕಾಂಗ್ರೆಸ್’​ಗೆ ಭಾರೀ ನಷ್ಟವಾಗುತ್ತದೆ. ಅಗತ್ಯ ಬಿದ್ದರೆ ಕೃಷ್ಣರ ಮಾರ್ಗದರ್ಶನ ಪಡೆಯುತ್ತೇನೆ. ಕೃಷ್ಣರ ರಾಜಿನಾಮೆಯಿಂದ ರಾಜಕೀಯದಲ್ಲಿ ಬದಲಾವಣೆ ಕೂಡ ಆಗಲಿದೆ ಎಂದು ಅವರು ಹೇಳಿದ್ದಾರೆ.