ಕೆಲವೇ ತಿಂಗಳಲ್ಲಿ ಕಡಿಮೆಯಾದ ಮೋದಿ ಅಲೆ: ಹೀನಾಯ ಸೋಲು ಕಂಡ ಬಿಜೆಪಿ

First Published 1, Feb 2018, 6:07 PM IST
Congress Scores 3 In Rajasthan Bypolls
Highlights

ಅಜ್ಮೀರ್ ಹಾಗೂ ಆಲ್ವಾರ್ ಲೋಕಸಭಾ ಕ್ಷೇತ್ರಗಳು ಹಾಗೂ ಮುದಲ್'ಗರ್ ವಿಧಾನ ಸಭಾ ಕ್ಷೇತ್ರಕ್ಕೆ ಜನಪ್ರತಿನಿಧಿಗಳ ಸಾವಿನ ಕಾರಣ ಮರು ಚುನಾವಣೆ ನಡೆದಿತ್ತು

ಜೈಪುರ(ಫೆ.01): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಜೆಪಿ ರಾಜಸ್ಥಾನದಲ್ಲಿ ನಡೆದ ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ.

ಎರಡು ಲೋಕಸಭಾ ಹಾಗೂ ಒಂದು ವಿದಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಅಂತರದ ಗೆಲುವು ಲಭಿಸಿದೆ. ಅಜ್ಮೀರ್ ಹಾಗೂ ಆಲ್ವಾರ್ ಲೋಕಸಭಾ ಕ್ಷೇತ್ರಗಳು ಹಾಗೂ ಮುದಲ್'ಗರ್ ವಿಧಾನ ಸಭಾ ಕ್ಷೇತ್ರಕ್ಕೆ ಜನಪ್ರತಿನಿಧಿಗಳ ಸಾವಿನ ಕಾರಣ ಮರು ಚುನಾವಣೆ ನಡೆದಿತ್ತು. ಕಳೆದ ಬಾರಿ ಈ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು.

ಜಯದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದು ರಾಜಸ್ಥಾನದ ಜನತೆಯ ಗೆಲುವು, ರಾಜ್ಯದ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ'ಎಂದು ಟ್ವೀಟ್ ಮಾಡಿದ್ದಾರೆ. ಮೂರು ಕ್ಷೇತ್ರಗಳಲ್ಲೂ ಸಿಎಂ ವಸುಂಧರಾ ರಾಜೆ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಅವಿರತವಾಗಿ ಪ್ರಚಾರ ನಡೆಸಿದ್ದರು.

loader