ಶತಮಾನದ ಪಕ್ಷ ಕಾಂಗ್ರೆಸ್‌ ಎಷ್ಟುಹೀನಾಯ ಸ್ಥಿತಿಯಲ್ಲಿದೆ ಎಂದರೆ ಲೋಕಸಭೆಯಲ್ಲಿ ನಾಯಕನನ್ನಾಗಿ ಮಾಡಲು ಒಬ್ಬ ಒಳ್ಳೆಯ, ದೇಶದ ತುಂಬೆಲ್ಲಾ ಪರಿಚಯ ಇರುವ ವ್ಯಕ್ತಿಯೇ ಸಿಗುತ್ತಿಲ್ಲ. ಕಳೆದ ಬಾರಿ ಖರ್ಗೆ ಒಬ್ಬ ಹಿರಿಯ ಸಂಸದೀಯ ಪಟು ಹೇಗಿರಬೇಕು ಎಂದು ಪೂರ್ತಿ ಸದನಕ್ಕೆ ತೋರಿಸಿದ್ದರು. ಈ ಬಾರಿ ಅವರು ಸೋತು ಮನೆಯಲ್ಲಿದ್ದಾರೆ.

ರಾಹುಲ್ ರಾಜಿನಾಮೆ; ಕಾಂಗ್ರೆಸ್‌ಗೆ ಸಂಕಷ್ಟ

ಜ್ಯೋತಿರಾದಿತ್ಯ ಸಿಂಧ್ಯಾ ಸೋತು ಅರಮನೆ ಸೇರಿಕೊಂಡಿದ್ದಾರೆ. ಸ್ವಲ್ಪಮಟ್ಟಿಗೆ ಮನೀಶ್‌ ತಿವಾರಿ ಹೆಸರು ಇತ್ತಾದರೂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ರ ಶಿಷ್ಯ ಎಂಬ ಕಾರಣಕ್ಕೆ ದಿಲ್ಲಿ ನಾಯಕರಿಗೆ ಅಪಥ್ಯ. ಕೊನೆಗೆ ಹುಡುಕಿ ತಂದಿದ್ದು, ಬಂಗಾಳಿ ಫೈರ್‌ಬ್ರ್ಯಾಂಡ್‌ ಮಮತಾ ಬ್ಯಾನರ್ಜಿಯ ಕಟ್ಟಾವಿರೋಧಿ ಅಧೀರ್‌ ರಂಜನ್‌ ಚೌಧರಿಯನ್ನು. ಇದರಿಂದ ಕಾಂಗ್ರೆಸ್‌ ಮತ್ತು ಮಮತಾ ನಡುವೆ ಬಿರುಕು ಜಾಸ್ತಿ ಆಗೋದು ನಿಶ್ಚಿತ. ಅಧೀರ್‌ ಚೌಧರಿ ಬಂಗಾಳಿ ಪಾಲಿಟಿಕ್ಸ್‌ ಬಿಟ್ಟು ದೇಶದ ರಾಜಕೀಯ ಮಾಡಬಲ್ಲರೇ ಎಂಬುದನ್ನು ನೋಡಬೇಕು. ಇಲ್ಲವಾದರೆ ಕಾಂಗ್ರೆಸ್‌ ಲೋಕಸಭೆಯಲ್ಲಿ ಪ್ರಾದೇಶಿಕ ಪಕ್ಷ ಎನಿಸಿಕೊಂಡರೂ ಆಶ್ಚರ್ಯವಿಲ್ಲ!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ