ಜಾಗತಿಕ ವೇದಿಕೆಯಲ್ಲಿ ಪಾಕ್ ಮಾನ ಹರಾಜಯ ಹಾಕಿದ ಶಶಿ ತರೂರ್| ಕಾಶ್ಮೀರ ವಿಚಾರವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಸಂಸದ| ರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ತರೂರ್ ರೌದ್ರಾವತಾರ| ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗ ಎಂದ ಶಶಿ ತರೂರ್| ‘ಕಾಶ್ಮೀರ ವಿಚಾರವಾಗಿ ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನ ಸುಳ್ಳು ಹೇಳುತ್ತಿದೆ’| ಭಾರತದ ಆಂತರಿಕ ವಿಚಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಒಪ್ಪಲ್ಲ ಎಂದ ಶಶಿ ತರೂರ್|  

ಬೆಲ್‌ಗ್ರೇಡ್(ಅ.17):ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ್ದಾರೆ.

ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಸಂಸತ್ತಿನ ನಿಯೋಗದ ಪರವಾಗಿ ಮಾತನಾಡಿದ ಶಶಿ ತರೂರ್​, ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಹೇಳುತ್ತಿರುವ ಸುಳ್ಳುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಪಾಕಿಸ್ತಾನ ಪ್ರಾಯೋಜಿತ ಉಗ್ರ ಕೃತ್ಯಗಳನ್ನು ಕಾಶ್ಮೀರದ ತಲೆಗೆ ಕಟ್ಟುವುದು ಸರಿಯಲ್ಲ ಎಂದು ಹೇಳಿರುವ ತರೂರ್, ಭಯೋತ್ಪಾದನೆಗೆ ಸಂಬಂಧಿಸಿದ ಎಲ್ಲ ದುಷ್ಕೃತ್ಯಗಳಿಗೆ ಪಾಕಿಸ್ತಾನವೇ ನೇರ ಹೊಣೆ ಎಂದು ಹರಿಹಾಯ್ದಿದ್ದಾರೆ.

Scroll to load tweet…

ಭಾರತದ ವಿರುದ್ಧ ಸದಾಕಾಲ ದ್ವೇಷ ಸಾಧಿಸುವ ಪಾಕಿಸ್ತಾನ, ನಮ್ಮ ಆಂತರಿಕ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತರೂರ್ ಕಿಡಿಕಾರಿದ್ದಾರೆ.

ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗವಾಗಿದ್ದು, ಜಾಗತಿಕ ವೇದಿಕೆಗಳಲ್ಲಿ ಪಾಖಿಸ್ತಾನ ಮೊಸಳೆ ಕಣ್ಣೀರು ಸುರಿಸುತ್ತಾ ನಾಟಕವಾಡುತ್ತಿದೆ ಎಂದು ತರೂರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ ಆರ್ಟಿಕಲ್​ 370 ರದ್ದತಿಗೆ ಭಾರತದ ವಿಪಕ್ಷಗಳ ವಿರೋಧ ಇದೆ ಎಂಬ ಪಾಕಿಸ್ತಾನದ ಮಾತಿಗೆ ಕೆಂಡಾಮಂಡಲವಾದ ಕಾಂಗ್ರೆಸ್ ಸಂಸದ, ನಾನು ಭಾರತದ ಅತೀ ದೊಡ್ಡ ಪಕ್ಷದ ಸಂಸದನಾಗಿದ್ದು, ನಮ್ಮ ಹೋರಾಟವನ್ನು ಪ್ರಜಾಪ್ರಭುತ್ವದ ನಿಯಮದಂತೆ ಸಂಸತ್ತಿನಲ್ಲಿ ನಡೆಸುವ ಹಕ್ಕು ಹೊಂದಿದ್ದೇವೆ ಎಂದು ತಿರುಗೇಟು ನೀಡಿದರು.