ಕೊಪ್ಪಳ (ಆ.03): ನಡತೆಗೆಟ್ಟ ಹುಡುಗಿಯ ಸ್ಥಿತಿ ಅತೃಪ್ತರದ್ದಾಗಿದೆ. ಪತಿವ್ರತೆಯರೆಲ್ಲರೂ ಮುಂಬೈಗೆ ಹಾರಿ ಹೋಗಿದ್ದರು ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ತಮ್ಮ ದಾಟಿಯಲ್ಲಿ ಅನರ್ಹಗೊಂಡ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು (ಶನಿವಾರ) ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಾವು ಹುಟ್ಟಿಸಿದ ಮಕ್ಕಳನ್ನು ನಮ್ಮ ಮಕ್ಕಳು ಎನ್ನುತ್ತಿರುವ ಬಿಜೆಪಿಯವರು ಗಂಡಸರಾ? ಎಂದು ಕಿಡಿಕಾರಿದರು.

ರಾಜೀನಾಮೆ ಕೊಟ್ಟವರಿಗೆ ಬಿಜೆಪಿ ಟಿಕೆಟ್ ಫಿಕ್ಸ್ , ಹಿರಿಯ ನಾಯಕ ಕೊಟ್ಟ ಸುಳಿವು

17 ಜನರನ್ನು ನಾವು ತಯಾರು ಮಾಡಿದ್ದೆವು. ಈಶ್ವರಪ್ಪ ಅವರು ವಂಶವೃಕ್ಷ ಸಿನಿಮಾ ನೋಡಬೇಕು. ಆಗ ಗೊತ್ತಾಗುತ್ತದೆ. ನಡತೆಗೆಟ್ಟ ಹುಡುಗಿ ಹೊರಹೋದರೆ ಏನು ಮಾಡಲಾಗುವುದಿಲ್ಲ. ಅತೃಪ್ತರೆಲ್ಲರೂ ನಡತೆಗೆಟ್ಟವರು ಎಂದು ಅಪಹಾಸ್ಯ ಮಾಡಿದರು.

ನಡತೆಗೆಟ್ಟ ಹುಡುಗಿಯ ಸ್ಥಿತಿ ಅತೃಪ್ತರದ್ದಾಗಿದೆ. ಪತಿವ್ರತೆಯರೆಲ್ಲರೂ ಮುಂಬೈಗೆ ಹಾರಿ ಹೋಗಿದ್ದರು. ಬಿಜೆಪಿಯವರು ಮೂರು ದಿವಸ ಇಟ್ಟುಕೊಂಡು ರಸ್ತೆಗೆ ಬಿಟ್ಟಿದ್ದು, ಈಗ ಬೀದಿಗೆ ಬಂದು ಅತೃಪ್ತರು ದೇವದಾಸಿಯರಾಗಿದ್ದಾರೆ ಎಂದು ಛೇಡಿಸಿದರು.