Asianet Suvarna News Asianet Suvarna News

ರಾಜೀನಾಮೆ ಕೊಟ್ಟವರಿಗೆ ಬಿಜೆಪಿ ಟಿಕೆಟ್ ಫಿಕ್ಸ್ , ಹಿರಿಯ ನಾಯಕ ಕೊಟ್ಟ ಸುಳಿವು

ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನವಾಗಿ ಬಿಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ಆರಂಭಿಸಿದೆ. ಆದರೆ ಸರ್ಕಾರ ರಚನೆಯಾಗಿ ವಾರವಾದರೂ ಸಚಿವ ಸಂಪುಟ ಮಾತ್ರ ವಿಸ್ತರಣೆಯಾಗಿಲ್ಲ. ಸಚಿವ ಸಂಪುಟದ ಬಗ್ಗೆ ಶಾಸಕ ಶ್ರೀರಾಮುಲು ಸಹ ಮಾತನ್ನಾಡಿದ್ದಾರೆ.

karnataka cabinet expansion MLA B Sriramulu Reaction
Author
Bengaluru, First Published Aug 2, 2019, 7:37 PM IST
  • Facebook
  • Twitter
  • Whatsapp

ಬಳ್ಳಾರಿ(ಆ. 02)  ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈ ಕಮಾಂಡ್ ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತದೆ. ಡಿಸಿಎಂ ಸ್ಥಾನದ ವಿಚಾರವಾಗಿ, ನಾನು ಏನೂ ಮಾತನಾಡುವುದಿಲ್ಲ. ಹೈ ಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

ಸಚಿವ ಸ್ಥಾನ ಯಾವ ಜಿಲ್ಲೆ  ಎಂದು ಅಂದುಕೊಂಡಿಲ್ಲ. ನಾನು  ಇಡೀ ರಾಜ್ಯಕ್ಕೆ ಸೀಮಿತವಾದವನು. ನನ್ನಂತಹ ನಾಯಕರು ಬಹಳ ಜನರಿದ್ದಾರೆ ಎಂದರು.

ಸೈನಿಕನೊಂದಿಗೆ ಬೆಳಗಾವಿಗೆ ಡಿಕೆಶಿ ಎಂಟ್ರಿ: ರಮೇಶ್ ಹಣಿಯಲು ಮಾಸ್ಟರ್ ಪ್ಲಾನ್‌

ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟ ಶಾಸಕರಿಗೂ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ. ಅವರು ನಮಗೆ ಸಹಾಯ ಮಾಡುತ್ತಾರೆ. ಉಪ ಚುನಾವಣೆ ಆಗುವ 17 ಸ್ಥಾನಗಳನ್ನು ನಾವು‌ ಗೆಲ್ಲುತ್ತೇವೆ. ರಿಸೈನ್ ಮಾಡಿದ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ನೀಡುವ ವಿಚಾರ ಹೈಕಮಾಂಡಿಗೆ ಬಿಟ್ಟಿದ್ದು ಎನ್ನುತ್ತಾ ಅನರ್ಹ ಶಾಸಕರ ಹೆಜ್ಜೆ ಬಿಜೆಪಿ ಕಡೆಗೆ ಇದೆ ಎಂಬುದನ್ನು ರಾಮುಲು ಪರೋಕ್ಷವಾಗಿ ಒಪ್ಪಿಕೊಂಡರು.

ಭಾಗದಲ್ಲಿ ಅರ್ಧ ಡಜನ್ ಗೂ ಹೆಚ್ಚು  ಸಚಿವಾಕಾಂಕ್ಷಿಗಳಿದ್ದು, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ  ಕೆ.ಪೂರ್ಣಿಮಾ,  ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ  ಶಾಸಕ ಚಂದ್ರಪ್ಪ ಸೇರಿದಂತೆ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೆಸರುಗಳು  ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ದಿಸಿ ಮೊಳಕಾಲ್ಮೂರಿನಲ್ಲಿ ಗೆಲುವು ಸಾಧಿಸಿದ  ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಪಟ್ಟ ದೊರಕಲಿದೆ ಎನ್ನುವ ಮಾತುಗಳನ್ನು ಹಿಂದಿನಿಂದಲೂ ಕೇಳಿಬಂದಿದ್ದವು.

karnataka cabinet expansion MLA B Sriramulu Reaction

 

Follow Us:
Download App:
  • android
  • ios