ಬಾಗಲಕೋಟೆ[ಜ.07] ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕ, ಶಾಸಕ ಮುರುಗೇಶ್ ನಿರಾಣಿ ಮನೆಯಲ್ಲಿ ಊಟ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈ ವಿಚಾರ ಅಸಮಾಧಾನ ಹುಟ್ಟುಹಾಕಿದೆ.

ಬೀಳಗಿ ಪಟ್ಟಣದ ಮಾಜಿ ಸಚಿವ ಮುರುಗೇಶ ನಿರಾಣಿ ಮನೆಯಲ್ಲಿ  ಕಾಂಗ್ರೆಸ್ ನಾಯಕರು ಊಟ ಮಾಡಿರುವುದು ನಿಧಾನಕ್ಕೆ ರಾಜಕಾರಣದ ಬಣ್ಣಕ್ಕೆ ತಿರುಗುತ್ತಿದೆ. ಸಚಿವ ಆರ್.ವಿ‌.ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಬೀಳಗಿ ತಾಲೂಕಿಗೆ ಭೇಟಿ ನೀಡಿತ್ತು. ಭೇಟಿ  ವೇಳೆ ಸಚಿವರಾದ ಆರ್.ವಿ‌.ದೇಶಪಾಂಡೆ, ಆರ್.ಬಿ.ತಿಮ್ಮಾಪೂರ, ಶಿವಾನಂದ ಪಾಟೀಲ ಸೇರಿದಂತೆ ಹಲವರು ಊಟಕ್ಕೆ ಆಗಮಿಸಿದ್ದರು.

ಲೋಕ ಚುನಾವಣಾ ಬೆನ್ನಲ್ಲೇ ಬಿಜೆಪಿ ಮೈತ್ರಿಗೆ ಮತ್ತೊಂದು ಪಕ್ಷ ಕೋಕ್?

ಈ ವೇಳೆ ಕಾಂಗ್ರೆಸ್ ಮುಖಂಡರು ನಿರಾಣಿ ಮನೆಗೆ ತೆರಳಿ ಊಟ ಮಾಡಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಚಿವ ದೇಶಪಾಂಡೆ ಈ ವಿಚಾರದ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿರಲಿಲ್ಲ.