ಬೆಂಗಳೂರು [ಜು.16] :  ರಾಜ್ಯ ರಾಜಕೀಯ ಪ್ರಹಸನದ ನಡುವೆ ಹೃದಯಾಘಾತದಿಂದ ಆಸ್ಪತ್ರೆ ಸೇರಿರುವ ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್  ಶಾಸಕ ನಾಗೇಂದ್ರ ಜೊತೆ ಜಮೀರ್ ಅಹಮದ್ ರಹಸ್ಯ ಮಾತುಕತೆ ನಡೆಸಿದ್ದಾರೆ. 

ನಾಗೇಂದ್ರ ಅವರನ್ನು 2 ಬಾರಿ ಆಸ್ಪತ್ರೆಯಲ್ಲಿ ಜಮೀರ್ ಅಹಮದ್ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಆಸ್ಟರ್  ಆಸ್ಪತ್ರೆಗೆ ತೆರಳಿದ ಬೆನ್ನಲ್ಲೇ ಜಮೀರ್ ಕೂಡ ಆಗಮಿಸಿ ಮಾತನಾಡಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿದ್ದರಾಮಯ್ಯ ಅವರು ನಾಗೇಂದ್ರ ಅವರನ್ನು ಭೇಟಿ ಮಾಡಿದ ಬಳಿಕ ಅವರನ್ನು ಕಳುಹಿಸಿ ಮತ್ತೆ ಆಸ್ಪತ್ರೆಗೆ ಜಮೀರ್ ತೆರಳಿ, ನಾಗೇಂದ್ರ ಅವರೊಂದಿಗೆ ಜಮೀರ್ ಅಹಮದ್ ಅರ್ಧ ಗಂಟೆಗೂ ಹೆಚ್ಚಿನ ಸಮಯ ರಹಸ್ಯವಾಗಿ ಮಾತನಾಡಿದರು. ಯಾವ ವಿಚಾರದ ಬಗ್ಗೆ ಚರ್ಚಿಸಿದ್ದಾರೆ ಎನ್ನುವುದು ಮಾತ್ರ ಬಹಿರಂಗವಾಗಿಲ್ಲ. 

ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಹೃದಯಾಘಾತ

ರಾಜ್ಯ ರಾಜಕೀಯ ಸ್ಥಿತಿ ಡೋಲಾಯಮಾನವಾಗಿದೆ. ಮೈತ್ರಿ ಸರ್ಕಾರ ಮುಂದುವರಿಯಲಿದೆಯಾ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದೇ ಬೆನ್ನಲ್ಲೇ ಕೈ ನಾಯಕರು ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ.