ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದರಾ ಎನ್ನುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. 

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಚಿತ್ರ ನಟಿ ರಮ್ಯಾ ಸೋಲಿಗೆ ಕಾಂಗ್ರೆಸ್‌ನಲ್ಲೇ ಪಿತೂರಿ ನಡೆದಿತ್ತಾ ಎಂಬ ವಿಚಾರದ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಇದೀಗ ಜೆಡಿಎಸ್‌ನಲ್ಲಿರುವ ಮಾಜಿ ಶಾಸಕ ಆರ್.ಎಲ್.ಶಿವರಾಮೇಗೌಡ ಅವರ ಹೇಳಿಕೆಯೇ ಈ ಚರ್ಚೆಗೆ ಕಾರಣ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಮ್ಯಾ ಅವರನ್ನು ಫ್ಲೈಯಿಂಗ್ ಸ್ಟಾರ್(ಬಣ್ಣದ ಚಿಟ್ಟೆ) ಬಣ್ಣಿಸಿರುವ ಅವರು, ಮೋಹಕ ತಾರೆಯ ಸೋಲಿಗೆ ಕಾಂಗ್ರೆಸ್‌ನಲ್ಲಿದ್ದ ತಾನೇ ಹಾರೈಸಿದ್ದೆ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ದಂದು ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದನಾ ಸಮಾರಂಭದಲ್ಲಿ ಮಾತನಾಡುವ ವೇಳೆ ಅವರು ಈ ವಿಷಯ ಬಹಿರಂಗ ಪಡಿಸಿದರು. ನಮ್ಮ ಪಕ್ಷದಿಂದ ಫ್ಲೈಯಿಂಗ್ ಸ್ಟಾರ್ ಚುನಾವಣೆಗೆ ನಿಂತಿದ್ರು. ಒಂದು ಲೆಟರ್‌ಗಾಗಿ ಬೆಂಗಳೂರಿಗೆ ಅವರ ಹಿಂದೆ ಸುತ್ತಬೇಕಾಗಿತ್ತು. 

ಈ ಫ್ಲೈಯಿಂಗ್ ಸ್ಟಾರ್ ಕೈಗೆ ಮಂಡ್ಯ ಜಿಲ್ಲೆ ಕೊಡಬಾರದು ಅಂತಾ ನಿರ್ಧಾರ ಮಾಡಿ ಕೆ.ಆರ್.ಎಸ್.ನಲ್ಲಿ ಪಕ್ಷದ ವಿರುದ್ಧ ಸಭೆ ಕರೆದಿದ್ದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಇದ್ರೂ ನಮ್ಮ ಪಾರ್ಟಿ ಸೋಲಲಿ ಅಂತೇಳಿ ಕಾಂಗ್ರೆಸ್ ಕಣ್ಣಿಗೆ ಗುರಿಯಾದೆ ಎಂದು ಅವರು ತಿಳಿಸಿದರು.