ಮಂಡ್ಯ [ಜೂ.21] : ಮಂಡ್ಯದಲ್ಲಿ  ನೀರು ಹರಿಸಲು ಕೆಂದ್ರ ಸರ್ಕಾರಕ್ಕೆ ಮನವಿ ಮಾಡಿದ ಬೆನ್ನಲ್ಲೇ ಇತ್ತ ಕೈ ನಾಯಕ ಚೆಲುವರಾಯಸ್ವಾಮಿ ಕೂಡ  ನೀರು ಹರಿಸಲು ಸಿಎಂ ಗೆ ಮನವಿ ಮಾಡಿದ್ದಾರೆ. 

ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಕಠಿಣವಾದ ಬರಗಾಲದ ಛಾಯೆ ಇದ್ದು ಈ ನಿಟ್ಟಿನಲ್ಲಿ, ಸಿಎಂ ಕೂಡಲೇ ನಾಲೆಗಳಿಗೆ ನೀರು ಹರಿಸಲಿ ಎಂದರು ಚೆಲುವರಾಯಸ್ವಾಮಿ ಹೇಳಿದರು.

ಮಂಡ್ಯ ರೈತರ ಪರ ಕೇಂದ್ರದ ಮೊರೆ ಹೋದ ಸಂಸದೆ ಸುಮಲತಾ

ಈ ಬಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಸಿಎಂ ಕೂಡಲೇ ಬೆಳೆಗಳಿಗೆ ನೀರು ಹರಿಸಬೇಕು.  ಕನಿಷ್ಠ 2TMC ನೀರು ಬಿಡಿಸಲಿ ಎಂದರು.

ಸಂಸದೆ ಸುಮಲತಾ ವಿರುದ್ಧ ಅವಾಚ್ಯ ಪದ ಬಳಕೆ: ದೂರು ದಾಖಲು

70 ಅಡಿ ನೀರು ಇದ್ದರೂ ನಾಲೆಗಳಿಗೆ ನೀರನ್ನು ಹರಿಸಿದ ಉದಾಹರಣೆಗಳಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೂಡಲೇ ಈ ವಿಚಾರವನ್ನು ಸಿಎಂ ಗಮನಕ್ಕೆ ತಂದು ನೀರು ಬಿಡಿಸಲಿ. ಈ ಮೂಲಕ ಸರ್ಕಾರ ಜಿಲ್ಲೆಯ, ರೈತರ ರಕ್ಷಣೆ ಮಾಡಬೇಕು ಎಂದರು.