ಮಂಡ್ಯ (ಜೂ.20) : ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿದ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ವಿರುದ್ಧ ಕತ್ತಿ ಮಸೆದಿದ್ದು ಒಬ್ಬಿಬ್ಬರಲ್ಲ. ಸ್ವಾಭಿಮಾನಿ ಮಂಡ್ಯ ಜನರ ಹೆಸರಿನಲ್ಲಿ ಚುನಾವಣಾ ಕಣಕ್ಕಿಳಿದ ಈ ಹೆಣ್ಣು ಮಗಳ ಆತ್ಮಸ್ಥೈರ್ಯ ಕುಂದಿಸುವ ಕಾರ್ಯಕ್ಕೆ ಅನೇಕರು ಮುಂದಾಗಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದವರೇನೂ ಕಡಿಮೆ ಇಲ್ಲ. ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು, ಸುಮಲತಾ ಅವರ ತೇಜೋವಧೆ ಮಾಡಲು ಯತ್ನಿಸಿದ್ದು ಇದೀಗ ಇತಿಹಾಸ. ಇಂಥ ದುಸ್ಸಾಹಸಕ್ಕೆ ಕೈ ಹಾಕಿದ್ದವರ ವಿರುದ್ಧ ಇದೀಗ ದೂರು ದಾಖಲಾಗಿದೆ.

ಮಂಡ್ಯ ಮಾಯಿಗೌಡ @ ಗೋವಿಂದ ವಿರುದ್ಧ ಸುಮಲತಾ ಬೆಂಬಲಿಗರು ಮಂಡ್ಯ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಮಂಡ್ಯ ಜಿಲ್ಲೆ ಮುರುಕನಹಳ್ಳಿಯ ಮಾಯಿಗೌಡ ಅವರು ಫೇಸ್‌ಬುಕ್ ನಲ್ಲಿ ಸಂಸದೆ ಸುಮಲತಾ ಅಂಬರೀಶ್ ನಟರಾದ ಯಶ್, ದರ್ಶನ್ ವರುದ್ಧ  ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೋಸ್ಟ್ ಹಾಕಿದ್ದರು. 

ಕಾಲೇಜಿನಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ? ನಿಖಿಲ್ ರಿಯಾಕ್ಷನ್ ನೋಡ್ಬೇಕಪ್ಪ

ಅಲ್ಲದೇ ಸುಮಲತಾ ಅಂಬರೀಶ್ ಅವರಿಗೆ ಮತ ನೀಡಿದ ಮಂಡ್ಯ ಒಕ್ಕಲಿಗ ಸಮುದಾಯವನ್ನೂ ಅಶ್ಲೀಲ ಅವಾಚ್ಯ, ಅವಹೇಳನಕಾರಿ ಪದಗಳಿಂದ ನಿಂದಿಸಿದ್ದರು. ಈ ನಿಟ್ಟಿನಲ್ಲಿ ಮಾಯಿ ಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಡ್ಯ ಸಂಸದೆ ಬೆಂಬಲಿಗರು ಪೊಲೀಸರನ್ನು ಆಗ್ರಹಿಸಿದ್ದಾರೆ.